
ವಿಡಿಯೊ, ಹಾಡಿನ ಅಲ್ಬಂಗಳು ವಿಶಿಷ್ಟ ಫೋಟೋ ಶೂಟ್ ಮಾಡಿಸಿದ ಕವರ್ ಹೊಂದಿರುತ್ತವೆ. ಅಂಥ ಅಲ್ಬಂ ಕವರ್ ಗಳಲ್ಲಿರುವ ವಿಶೇಷ ಫೋಟೋಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ. ಇಂಗ್ಲೆಂಡ್ ಎಡ್ಗ್ವೇರ್ನ ಸೇಯ್ಡ್ಮರ್ ಲಾಡ್ಜ್ ಹೋಂ(ವೃದ್ಧಾಶ್ರಮ)ನ ಸದಸ್ಯರು ಲಾಕ್ಡೌನ್ ಅವಧಿಯಲ್ಲಿ ಪ್ರಸಿದ್ಧ ಅಲ್ಬಂ ಕವರ್ ಗಳನ್ನು ಫೋಟೋ ಶೂಟ್ ಮೂಲಕ ಮರು ಸೃಷ್ಟಿ ಮಾಡಿದ್ದಾರೆ.
ಲಾಕ್ಡೌನ್ ನ ನಾಲ್ಕು ತಿಂಗಳ ಅವಧಿಯಲ್ಲಿ ವೃದ್ಧಾಶ್ರಮಕ್ಕೆ ಯಾರೂ ಭೇಟಿ ಕೊಡುವವರಿರಲಿಲ್ಲ. ಹೊರಗೆ ಓಡಾಡುವಂತೆಯೂ ಇರಲಿಲ್ಲ ಇದರಿಂದ ಯಾವುದಾದರೂ ಕ್ರಿಯಾತ್ಮಕ ಕಾರ್ಯ ಮಾಡಬೇಕು ಎಂದು ನಿರ್ಧರಿಸಿದರು.
ಆಶ್ರಮದ ಕ್ರಿಯಾಶೀಲ ಮ್ಯಾನೇಜರ್ ರಾಬರ್ಟ್ ಸ್ಪೀಕರ್ ಅಲ್ಬಂ ಕವರ್ನ ಫೋಟೋಶೂಟ್ ಮಾಡುವ ಯೋಜನೆ ರೂಪಿಸಿದರು. ಎಲ್ಲ ಸದಸ್ಯರಲ್ಲಿ ಸ್ಪೂರ್ತಿ ತುಂಬಿದರು. ಅವರು ಮೂಲ ಚಿತ್ರಗಳ ಪ್ರತಿಯನ್ನು ತರಿಸಿದರು.
ಪ್ರಸಿದ್ಧವಾದ ಎಡೆಲ್-21, 1989 ರ ಟೇಲರ್ ಸ್ಟಿಪ್ಟ್, ಬ್ರೂಸ್ ಸ್ಪ್ರಿಂಗ್ಸ್ಟೀನ್ ಅವರ ಬೋರ್ನ್ ಇನ್ ಯುಎಸ್ಎ, ಮತ್ತು ಕ್ವೀನ್-2 ಮುಂತಾದ ಅಲ್ಬಂಗಳ ಕವರ್ ಫೋಟೋಗಳಂತೆ ಮತ್ತೆ ಆಶ್ರಮದ ಸದಸ್ಯರು ವೇಷ ತೊಟ್ಟು ಫೋಟೋ ಹೊಡೆದಿದ್ದಾರೆ.
ಮ್ಯಾನೇಜರ್ ಟೇಲರ್ ಅವರು ಟ್ವಿಟರ್ ನಲ್ಲಿ ಅಲ್ಬಂ ಕವರ್ ನ ಮರು ಸೃಷ್ಟಿಯನ್ನು ಶೇರ್ ಮಾಡಿದ್ದು, ಎಡ್ಗ್ವೇರ್ನ ಸೇಯ್ಡ್ಮರ್ ಲಾಡ್ಜ್ ಹೋಂನ ಸದಸ್ಯರು ಲಾಕ್ಡೌನ್ನ ನಾಲ್ಕು ತಿಂಗಳಲ್ಲಿ ಮಾಡಿದ ಕಾರ್ಯ ಎಂದು ತಿಳಿಸಿದ್ದಾರೆ. ಅವರ ಪೋಸ್ಟ್ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, 1 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. 42 ಸಾವಿರ ಜನರು ಪ್ರತಿಕ್ರಿಯಿಸಿದ್ದಾರೆ.