ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ತಿಂಗಳಲ್ಲಿ ಇಬ್ಬರ ಮದುವೆ ನೆರವೇರಲಿದೆ. ವರುಣ್-ನತಾಶಾ ಹಿಂದಿನ ವರ್ಷ ಮೇ ತಿಂಗಳಿನಲ್ಲಿ ಮದುವೆಯಾಗಬೇಕಿತ್ತು. ಆದ್ರೆ ಕೊರೊನಾ ಕಾರಣಕ್ಕೆ ಮದುವೆಯನ್ನು ಮುಂದೂಡಿದ್ದರು.
ವರುಣ್ ಧವನ್ ಹಾಗೂ ನತಾಶಾ ಮದುವೆ ಅಲಿಬಾಗ್ ಹೊಟೇಲ್ ನಲ್ಲಿ ನಡೆಯಲಿದೆ. ಮದುವೆ ಪಂಜಾಬಿ ಸಂಪ್ರದಾಯದಂತೆ ನಡೆಯಲಿದೆ. 200 ಮಂದಿ ಮದುವೆಗೆ ಹಾಜರಾಗಲಿದ್ದಾರೆಂದು ಮೂಲಗಳು ಹೇಳಿವೆ. ಮದುವೆಗೆ ಹೊಟೇಲ್ ಬುಕ್ ಮಾಡುವ ಕಾರಣಕ್ಕೆ ಕೆಲ ದಿನಗಳ ಹಿಂದೆ ವರುಣ್ ಧವನ್ ಅಲಿಬಾಗ್ ಗೆ ಬಂದಿದ್ದರು.
ಕಾಫಿ ವಿತ್ ಕರಣ್ 6ನೇ ಸರಣಿಯಲ್ಲಿ ವರುಣ್, ನತಾಶಾ ಪ್ರೀತಿ ಮಾಡ್ತಿರುವುದಾಗಿ ಹೇಳಿದ್ದರು. ಕುಟುಂಬಸ್ಥರು ಕೂಡ ಅವ್ರ ಪ್ರೀತಿಯನ್ನು ಸ್ವೀಕರಿಸಿದ್ದರು. ಎರಡು ವರ್ಷಗಳಿಂದ ನನ್ನ ಮದುವೆ ಬಗ್ಗೆ ಜನರು ಮಾತನಾಡ್ತಿದ್ದಾರೆ. 2021ರೊಳಗೆ ನಾನು ಮದುವೆಯಾಗ್ತೇನೆಂದು ವರುಣ್ ಹೇಳಿದ್ದರು. ಆದ್ರೆ ಕೊರೊನಾ ವರುಣ್ ಮದುವೆಗೆ ಅಡ್ಡಿಯಾಗಿತ್ತು.