ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರಿಯರಿಗೆ ಬಂಧನದ ಭೀತಿ ಎದುರಾಗಿದೆ. ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮಿತು ಸಿಂಗ್ ವಿರುದ್ಧ ರಿಯಾ ಚಕ್ರವರ್ತಿ ಸೆಪ್ಟೆಂಬರ್ ನಲ್ಲಿ ಎಫ್ಐಆರ್ ದಾಖಲಿಸಿದ್ದರು. ಸಿಬಿಐ, ಸುಶಾಂತ್ ಸಿಂಗ್ ಸಹೋದರಿಯರನ್ನು ಯಾವಾಗ ಬೇಕಾದ್ರೂ ಬಂಧಿಸಬಹುದು.
ಬಂಧನ ಭೀತಿಯಲ್ಲಿರುವ ಸುಶಾಂತ್ ಸಹೋದರಿಯರು ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದಷ್ಟು ಬೇಗ ಪ್ರಕರಣ ಇತ್ಯರ್ಥಪಡಿಸುವಂತೆ ಮನವಿ ಸಲ್ಲಿಸಿದ್ದಾರೆ.
ರಿಯಾ ಚಕ್ರವರ್ತಿ ಸೆಪ್ಟೆಂಬರ್ನಲ್ಲಿ ಸುಶಾಂತ್ ಸಹೋದರಿಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಸುಶಾಂತ್ ಸಹೋದರಿಯರು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸುಶಾಂತ್ ಗೆ ಔಷಧಿ ನೀಡ್ತಿದ್ದರು. ಇದ್ರಿಂದಾಗಿ ಸುಶಾಂತ್ ಆರೋಗ್ಯ ಹದಗೆಟ್ಟಿತ್ತು ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ರಿಯಾ ಹೇಳಿದ್ದರು. ರಿಯಾ ಎಫ್ ಐ ಆರ್ ಈಗ ಸಿಬಿಐ ಕೈನಲ್ಲಿದೆ. ಸಿಬಿಐ, ಸುಶಾಂತ್ ಸಹೋದರಿಯರನ್ನು ಬಂಧಿಸುವ ಸಾಧ್ಯತೆಯಿದೆ.
ಇದೇ ಭಯದಲ್ಲಿರುವ ಸಹೋದರಿಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ರಿಯಾ ಕೂಡ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಶಾಂತ್ ಸಹೋದರಿಯರ ಅರ್ಜಿ ವಜಾ ಮಾಡಿ, ಇಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.