ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತ್ರ ಇದ್ರ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದೆ. ಬಾಲಿವುಡ್ ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಹಾಗೂ ಸಹನಟಿ ಅಂಕಿತಾ ಲೋಖಂಡೆ ಸುಶಾಂತ್ ಆತ್ಮಹತ್ಯೆ ನಂತ್ರ ಸಾಮಾಜಿಕ ಜಾಲತಾಣದಿಂದ ದೂರವಿದ್ದಾರೆ. ಈ ಮಧ್ಯೆ ಸುಶಾಂತ್, ಅಂಕಿತಾ ಬಗ್ಗೆ ಹೇಳಿರುವ ವಿಡಿಯೋ ಒಂದು ವೈರಲ್ ಆಗಿದೆ.
ಸುಶಾಂತ್ ವಿಡಿಯೋದಲ್ಲಿ ಕವಿತೆ ಹೇಳ್ತಾರೆ. ನಂತ್ರ ಅಂಕಿತಾ ಮತ್ತು ಸುಶಾಂತ್ ಮಧ್ಯೆಯಿರುವ ಪ್ರೀತಿ ಬಗ್ಗೆ ಹೇಳ್ತಾರೆ. ಸಂಬಂಧ ಮುರಿಯಲು ಪ್ರತಿ ದಿನ ಸಾಕಷ್ಟು ಕಾರಣ ನೀಡಬಹುದು. ಆದ್ರೆ ಸಂಬಂಧ ಉಳಿಸಿಕೊಳ್ಳುವುದು ಮುಖ್ಯ. ಅವ್ರನ್ನು ಬಿಟ್ಟು ನನ್ನಿಂದ ಇರಲು ಸಾಧ್ಯವಿಲ್ಲ ಎಂಬುದು ಗೊತ್ತಾಗಬೇಕು. ಅಂಕಿತಾ ಇಲ್ಲದೆ ಬದುಕು ಸಾಧ್ಯವಿಲ್ಲ. ಹಾಗಾಗಿಯೇ ನಾನು ಭಾವುಕನಾಗಿರುತ್ತೇನೆ. ನಾನು ಅವಳ ಜೊತೆ ಬದುಕಲು ಇಷ್ಟಪಡ್ತೇನೆ ಎಂದಿದ್ದರು.
ಏಕ್ತಾ ಕಪೂರ್ ಅವರ ಟಿವಿ ಶೋ ‘ಪವಿತ್ರಾ ರಿಷ್ತಾದಲ್ಲಿ ಸುಶಾಂತ್ ಮತ್ತು ಅಂಕಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಯೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಈ ಧಾರಾವಾಹಿ ಮುಗಿದು ಸುಶಾಂತ್ ಬಾಲಿವುಡ್ ಕಡೆಗೆ ಹೋದಾಗ ಸಂಬಂಧ ಮುರಿಯಲು ಪ್ರಾರಂಭಬಾಗಿತ್ತು. ಕೊನೆಗೆ ಅಭಿಮಾನಿಗಳಿಗೆ ನಿರಾಶೆ ಸುದ್ದಿ ಸಿಕ್ಕಿತ್ತು.
https://www.instagram.com/p/CCCs_luBCVQ/?utm_source=ig_embed