ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಕೊಲೆಯೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ರಿಯಾ ಚಕ್ರವರ್ತಿ ಸುಶಾಂತ್ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಈಗ ಸುಶಾಂತ್ ತಂದೆ ಹೇಳಿಕೆ ಶಾಕ್ ನೀಡಿದೆ.
ಎರಡು ದಿನಗಳ ಹಿಂದೆ ಕೆಕೆ ಸಿಂಗ್ ವಿಡಿಯೋ ಒಂದು ವೈರಲ್ ಆಗಿತ್ತು. ಇದ್ರಲ್ಲಿ ರಿಯಾ ಚಕ್ರವರ್ತಿ ಬಂಧಿಸುವಂತೆ ಕೆಕೆ ಸಿಂಗ್ ಬೇಡಿಕೆಯಿಟ್ಟಿದ್ದರು. ಆದ್ರೆ ಪೊಲೀಸ್ ಮುಂದೆ ಕೆಕೆ ಸಿಂಗ್ ಬೇರೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ನನ್ನ ಮಗನ ಸಾವು ಕೊಲೆಯಲ್ಲ. ಆತ್ಮಹತ್ಯೆಯಿರಬಹುದು. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನನಗೆ ತಿಳಿದಿಲ್ಲ. ಈ ಬಗ್ಗೆ ನಾನು ಯಾವುದೇ ಆರೋಪ ಮಾಡುವುದಿಲ್ಲ. ಯಾರ ಬಗ್ಗೆಯೂ ದೂರಿಲ್ಲ. ಯಾರ ಬಗ್ಗೆಯೂ ಅನುಮಾನವಿಲ್ಲ. ಸುಶಾಂತ್ ದುಃಖಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕೆಕೆ ಸಿಂಗ್ ಹೇಳಿದ್ದಾರೆ.
ಮೇ.13ರಂದು ಸುಶಾಂತ್ ರನ್ನು ಭೇಟಿಯಾಗಿದ್ದೆ. ನಂತ್ರ ವಾಟ್ಸಾಪ್ ನಲ್ಲಿ ಮಾತನಾಡ್ತಿದ್ದರು. ಹೆಚ್ಚು ಕರೆ ಮಾಡಲು ಹೋಗ್ತಿರಲಿಲ್ಲ. ಯಾಕೆಂದ್ರೆ ಅವರು ಬ್ಯುಸಿಯಿರುತ್ತಿದ್ದರು. ಆದ್ರೆ ಜೂನ್ 14ರಂದು ಟಿವಿಯಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ವಿಷ್ಯ ಗೊತ್ತಾಯ್ತು. ಅಲ್ಲೆ ಕುಸಿದು ಬಿದ್ದೆ ಎಂದು ಕೆಕೆ ಸಿಂಗ್ ಹೇಳಿದ್ದಾರೆ.