![](https://kannadadunia.com/wp-content/uploads/2020/07/322-1594894940-1595138593-1596011018.jpg)
ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳಾಗ್ತಿವೆ. ಸುಶಾಂತ್ ಸಾವನ್ನಪ್ಪಿದ 42ನೇ ದಿನ ಕುಟುಂಬಸ್ಥರು ಮೌನ ಮುರಿದಿದ್ದಾರೆ.
ಸುಶಾಂತ್ ತಂದೆ ಕೆ.ಕೆ.ಸಿಂಗ್ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾಗ್ತಿದ್ದಂತೆ ರಿಯಾ, ದೇಶದ ದುಬಾರಿ ವಕೀಲರಲ್ಲಿ ಒಬ್ಬರಾದ ಸತೀಶ್ ಮನೇಶಿಂದೆ ಅವರನ್ನು ವಕೀಲರನ್ನಾಗಿ ನೇಮಿಸಿಕೊಂಡಿದ್ದಾಳೆ.
ಸತೀಶ್, ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಪ್ರಕರಣಗಳಲ್ಲಿ ವಕೀಲರಾಗಿದ್ದರು. ಈಗಾಗಲೇ ಪ್ರಕರಣ ದಾಖಲಾಗಿದ್ದು, ಬಿಹಾರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಿಯಾ ಚಕ್ರವರ್ತಿ ಈ ಪ್ರಕರಣವನ್ನು ಗೆಲ್ಲಲು ಸತೀಶ್ ಮನೇಶಿಂದೆಯವರನ್ನು ನೇಮಿಸಿಕೊಂಡಿದ್ದಾಳೆ. ಖ್ಯಾತ ವಕೀಲ ಸತೀಶ್ ಮನೇಶಿಂದೆ, 1993 ರ ಸಂಜಯ್ ದತ್ ಅವರ ಮುಂಬೈ ಬ್ಲಾಸ್ಟ್ ಕೇಸ್ ಮತ್ತು ಸಲ್ಮಾನ್ ಖಾನ್ ಅವರ 1998 ರ ಬ್ಲ್ಯಾಕ್ಬಕ್ ಕೇಸ್ ವಿರುದ್ಧ ಹೋರಾಡಿದ್ದರು. ಈಗಾಗಲೇ ರಿಯಾ, ಸತೀಶ್ ಅವರ ಜೂನಿಯರ್ ವಕೀಲ ಆನಂದಿನಿ ಫರ್ನಾಂಡಿಸ್ ಜೊತೆ ಮಾತನಾಡಿದ್ದಾಳೆ. ಪಾಟ್ನಾದ ನಾಲ್ವರು ಪೊಲೀಸರು ಮುಂಬೈ ತಲುಪಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.