ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತ್ರ ದಿನಕ್ಕೊಂದು ಹೊಸ ವಿಷ್ಯ ಬಹಿರಂಗವಾಗ್ತಿದೆ. ಮುಂಬೈ ಪೊಲೀಸ್, ಪಾಟ್ನಾ ಪೊಲೀಸ್, ಇಡಿ, ಸಿಬಿಐ ಜೊತೆಗೆ ಮಾಧ್ಯಮಗಳು ಸುಶಾಂತ್ ಸಾವಿನ ರಹಸ್ಯ ಪತ್ತೆ ಹಚ್ಚುವ ಕೆಲಸ ಮಾಡ್ತಿವೆ. ಈಗ ಸುಶಾಂತ್ ಸಾವಿನ ದಿನದ ಬಗ್ಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನ ಬಿಲ್ಡಿಂಗ್ ಗೆ ಅಪರಿಚಿತ ಮಹಿಳೆ ಬಂದಿದ್ದಾಳೆ. ಕಪ್ಪು ಬ್ಯಾಗ್ ಕೂಡ ಇದೆ. ರಿಪಬ್ಲಿಕ್ ಟಿವಿ ತನ್ನ ಬಳಿ ಮೂರು ವಿಡಿಯೋ ಇದೆ ಎನ್ನುತ್ತಿದೆ. ಒಂದು ವಿಡಿಯೋದಲ್ಲಿ ಕಪ್ಪು ಚೀಲದೊಂದಿಗೆ ಸುಶಾಂತ್ ಕೋಣೆಯಲ್ಲಿ ವ್ಯಕ್ತಿ ಕಾಣಿಸಿಕೊಂಡಿದ್ದಾನೆ.
ಇನ್ನೊಂದು ವಿಡಿಯೋದಲ್ಲಿ ಕಪ್ಪು ಬ್ಯಾಗ್ ಜೊತೆ ಕಟ್ಟಡದಿಂದ ಹೊರಗೆ ಹೋಗ್ತಾನೆ. ಮತ್ತೊಂದು ವಿಡಿಯೋದಲ್ಲಿ ಆತನ ಜೊತೆ ಮಹಿಳೆಯೊಬ್ಬಳು ಮಾತನಾಡ್ತಿದ್ದಾಳೆ. ಆದ್ರೆ ಆಗ ಆತನ ಕೈನಲ್ಲಿ ಬ್ಯಾಗ್ ಇರುವುದಿಲ್ಲ. ಪೊಲೀಸ್ ಮುಂದೆಯೇ ಇದೆಲ್ಲ ನಡೆದಿದೆ ಎಂದು ಟಿವಿ ವರದಿ ಮಾಡಿದೆ.
ಇಬ್ಬರೂ ಮಾಸ್ಕ್ ಹಾಕಿರುವ ಕಾರಣ ಗುರುತು ಪತ್ತೆಯಾಗಿಲ್ಲ. ರಿಪಬ್ಲಿಕ್ ಟಿವಿ ಇದ್ರ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದೆ. ಸುಶಾಂತ್ ಕುಟುಂಬ ಈ ಹಿಂದೆಯೇ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಆರೋಪ ಮಾಡಿತ್ತು.