
ಸನ್ನಿ ಲಿಯೋನ್. ಹೆಸರು ಕೇಳ್ತಿದ್ದಂತೆ ಪಡ್ಡೆ ಹುಡುಗ್ರು ಎದ್ದು ಕುಳಿತುಕೊಳ್ತಾರೆ. ಸಿನಿಮಾಗಳಿಂದ ದೂರವಿದ್ರೂ ಸನ್ನಿ ಲಿಯೋನ್ ಪ್ರಸಿದ್ಧಿ ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸನ್ನಿ ಲಿಯೋನ್ ಆಗಾಗ ಹಾಟ್ ಫೋಟೋ, ವಿಡಿಯೋಗಳನ್ನು ಹಾಕಿ ಹೃದಯ ಬಡಿತ ಹೆಚ್ಚಿಸುತ್ತಾಳೆ. ಈಗ ಮತ್ತೆ ಸನ್ನಿ ಸುದ್ದಿಯಲ್ಲಿದ್ದಾಳೆ.
ಇನ್ ಸ್ಟಾಗ್ರಾಮ್ ನಲ್ಲಿ ಸನ್ನಿ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಸನ್ನಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಬಾತ್ ಡಬ್ ನಲ್ಲಿ ಕುಳಿತಿರುವ ಸನ್ನಿ ಗುಲಾಬಿ ಲಿಪ್ಸ್ಟಿಕ್ ಎಲ್ಲರ ಗಮನ ಸೆಳೆಯುತ್ತಿದೆ.
ಮನೆಯಲ್ಲಿ ಕುಳಿತುಕೊಳ್ಳೋದು ಕಷ್ಟ. ತುಂಬಾ ದಿನಗಳಿಂದ ನೀವು ಮನೆಯಲ್ಲಿದ್ದೀರಿ. ಆದ್ರೆ ಇದು ಅವಶ್ಯಕ. ನಿಧಾನವಾಗಿ ಎಲ್ಲವೂ ಸರಿಯಾಗುತ್ತದೆ. ಬಿ ಪಾಸಿಟಿವ್ ಎಂದು ಸನ್ನಿ ಫೋಟೋ ಜೊತೆ ಬರೆದುಕೊಂಡಿದ್ದಾಳೆ. ಸನ್ನಿ ಸದ್ಯ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಸನ್ನಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾಳೆ. ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಕೆಲ ಫೋಟೋಗಳನ್ನು ಸನ್ನಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು.