ಬಾಲಿವುಡ್ ನಟ ಸೋನು ಸೂದ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದಂದು ಸೋನು ಸೋದ್ ಅಭಿಮಾನಿಗಳನ್ನು ಮತ್ತಷ್ಟು ಖುಷಿಗೊಳಿಸಿದ್ದಾರೆ. 3 ಲಕ್ಷ ನೌಕರಿ ನೀಡುವ ಭರವಸೆ ನೀಡಿದ್ದಾರೆ. ವಲಸೆ ಕಾರ್ಮಿಕರಿಗೆ ನೌಕರಿ ನೀಡುವುದಾಗಿ ಸೋನು ಹೇಳಿದ್ದಾರೆ.
ಸೋನು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸೋನು ಸುದ್ದಿಗೆ ಬಂದಿದ್ದರು. ಸೋನು ಅನೇಕ ವಲಸೆ ಕಾರ್ಮಿಕರಿಗೆ ನೆರವಾಗಿದ್ದಾರೆ.
ನನ್ನ ಜನ್ಮದಿನದಂದು ನನ್ನ ವಲಸೆ ಸಹೋದರರಿಗಾಗಿ http://PravasiRojgar.com 3 ಲಕ್ಷ ಉದ್ಯೋಗ ನೀಡುವ ಒಪ್ಪಂದ ಮಾಡ್ತಿದೆ. ಉತ್ತಮ ಸಂಬಳ, ಪಿಎಫ್, ಇಎಸ್‌ಐ ಮತ್ತು ಇತರ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಎಇಪಿಸಿ, ಸಿಐಟಿಐ, ಟ್ರೈಡೆಂಟ್, ಕ್ವೆಸ್ ಕಾರ್ಪ್, ಅಮೆಜಾನ್, ಸೊಡೆಕ್ಸೊ, ಅರ್ಬನ್ ಕೋ, ಪೋರ್ಟಿಯಾ ಮತ್ತು ಇತರ ಎಲ್ಲರಿಗೂ ಧನ್ಯವಾದಗಳು ಎಂದು ಸೋನು ಟ್ವೀಟ್ ಮಾಡಿದ್ದಾರೆ.