ಖ್ಯಾತ ಗಾಯಕ ಸೋನು ನಿಗಮ್ ಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸೋನು ನಿಗಮ್ ಅವರ ಪತ್ನಿ ಮತ್ತು ಮಗನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋನು ನಿಗಮ್ ಕುಟುಂಬ ದುಬೈನಲ್ಲಿ ತಂಗಿದ್ದು, ಅಲ್ಲಿ ಪ್ರತ್ಯೇಕ ವಾಸದಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಸೋನು ನಿಗಮ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋನು ನಿಗಮ್ ಜೊತೆಗೆ ಅವರ ಪುತ್ರ ನೀವನ್ ನಿಗಮ್, ಪತ್ನಿ ಮಧುರಿಮಾ ನಿಗಮ್ ಕೂಡ ಕೊರೊನಾ ಸೋಂಕು ತಗುಲಿದೆ. ಅವರು ದುಬೈನಲ್ಲಿದ್ದು, ಕೊರೋನಾಗೆ ಚಿಕಿತ್ಸೆ ಪಡೆದಿದ್ದಾರೆ.
ಸೋನು ನಿಗಮ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಕೋವಿಡ್ ಪಾಸಿಟಿವ್ ಬಂದ ಬಗ್ಗೆ ಹೇಳಿಕೊಂಡಿದ್ದು, ಭಯಪಡುವಂಥದ್ದೇನೂ ಇಲ್ಲ. ಭುವನೇಶ್ವರದಲ್ಲಿ ಪ್ರದರ್ಶನ ನೀಡಬೇಕಾಗಿದೆ. ಸೂಪರ್ ಸಿಂಗರ್ ಸೀಸನ್ 3 ರ ಚಿತ್ರೀಕರಣಕ್ಕಾಗಿ ಬರಬೇಕಿದೆ. ಕೊರೋನಾ ಪರೀಕ್ಷೆ ಮಾಡಿದಾಗ, ನಾನು ಪಾಸಿಟಿವ್ ಎಂದು ಕಂಡುಬಂದಿದೆ. ಕ್ರಮೇಣ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ತಮ್ಮ ಪತ್ನಿ ಮಧುರಿಮಾ ನಿಗಮ್ ಮತ್ತು ಪುತ್ರ ನಿವಾನ್, ಪತ್ನಿಯ ಸಹೋದರಿ ಎಲ್ಲರೂ ಸೋಂಕಿಗೆ ಒಳಗಾಗಿದ್ದಾರೆ. ದುಬೈನಲ್ಲಿಯೇ ಕುಟುಂಬದೊಂದಿಗೆ ಕ್ವಾರಂಟೈನ್ ಆಗಿರುವುದಾಗಿ ಸೋನು ನಿಗಮ್ ಹೇಳಿದ್ದಾರೆ.