
ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತನಿಖಾ ತಂಡಗಳು ವಿಚಾರಣೆ ನಡೆಸುತ್ತಿವೆ. ಸುಶಾಂತ್ ಸಿಂಗ್ ಪ್ರಕರಣ ಪ್ರಮುಖ ಆರೋಪಿ ರಿಯಾ ಜೈಲಿನಲ್ಲಿದ್ದಾಳೆ. ಮುಂಬೈನ ಪ್ರಸಿದ್ಧ ವಕೀಲರಲ್ಲಿ ಒಬ್ಬರಾದ ಸತೀಶ್ ಮನೇಶಿಂದೆ ರಿಯಾ ವಕೀಲರಾಗಿದ್ದಾರೆ. ರಿಯಾ ಜೊತೆ ಸತೀಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದ್ದಾರೆ.
ಸತೀಶ್ ಶುಲ್ಕದ ಬಗ್ಗೆ ಚರ್ಚೆಯಾಗ್ತಿದೆ. ಸತೀಶ್ ಮುಂಬೈನ ಪ್ರಸಿದ್ಧ ವಕೀಲರಲ್ಲಿ ಒಬ್ಬರು. ಸಲ್ಮಾನ್ ಖಾನ್, ಸಂಜಯ್ ದತ್ ಪ್ರಕರಣದ ವೇಳೆಯೂ ಅವರ ಪರ ವಾದ ಮಂಡಿಸಿದ್ದರು. ರಿಯಾ ಈಗ ಸತೀಶ್ ಆಯ್ಕೆ ಮಾಡಿಕೊಂಡಿದ್ದು, ದೊಡ್ಡ ಮಟ್ಟದ ಹಣವನ್ನು ರಿಯಾ ಎಲ್ಲಿಂದ ತರ್ತಾಳೆ ಎಂಬ ಬಗ್ಗೆಯೂ ಚರ್ಚೆಯಾಗ್ತಿದೆ.
ಈ ಎಲ್ಲದರ ಮಧ್ಯೆ ಸತೀಶ್ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಶುಲ್ಕದ ಬಗ್ಗೆ ಹಬ್ಬಿರುವ ಸುದ್ದಿ ವದಂತಿ ಎಂದವರು ಹೇಳಿದ್ದಾರೆ. ಶುಲ್ಕ ತೆಗೆದುಕೊಳ್ಳದೆ ಉಚಿತವಾಗಿ ವಕಾಲತ್ತು ಮಾಡ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇದು ಕೂಡ ಸುಳ್ಳು. ಶುಲ್ಕದ ವಿಷ್ಯ ನನ್ನ ಮತ್ತು ನನ್ನ ಕ್ಲೈಂಟ್ ಗೆ ಸಂಬಂಧಿಸಿದ್ದು. ಇದ್ರ ಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಸತೀಶ್ ಹೇಳಿದ್ದಾರೆ.