ಬಾಲಿವುಡ್, ಟಾಲಿವುಡ್ ಸೇರಿದಂತೆ ಯಾವುದೇ ಚಿತ್ರೋದ್ಯಮ ನೋಡಿದರೂ, ಅಲ್ಲೊಂದು ಸಹಜ ಜೀವನಕ್ಕಿಂತ ಹೆಚ್ಚು ವೈಭವೀಕರಿಸಿದ ಸನ್ನಿವೇಶಗಳು ಎದುರಾಗುತ್ತವೆ. ಅದರಲ್ಲೂ ಬಾಲಿವುಡ್‌ನಲ್ಲಿ ಇದು ತುಸು ಹೆಚ್ಚು ಎನ್ನಬಹುದು.
ಹೌದು, ಕೆಲ ಉದಾಹರಣೆ ನೋಡುವುದಾದರೆ, ದೊಡ್ಡ ಗಲಾಟೆಯಾಗುವಾಗ ವಿಲನ್‌ಗಳು ಹೀರೋ ಮೇಲೆ ಬುಲೆಟ್‌ಗಳ ಸುರಿಮಳೆಗೈದರೂ ಹೀರೋ ಮಾತ್ರ ಸಾಯುವುದಿಲ್ಲ. ಆದರೆ ನಿಜ ಜೀವನದಲ್ಲಿ ಇದು ಸಾಧ್ಯವೇ…?
ಇನ್ನು ಹೀರೋ ಒಬ್ಬ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಡಾನ್ಸ್ ಮಾಡಲು ಶುರು ಮಾಡಿದರೆ ಏನನಿಸುದಿಲ್ಲ…? ಸಾಮಾನ್ಯ ವ್ಯಕ್ತಿ ಹಾಗೇ ಮಾಡಿದರೆ ಹುಚ್ಚಾಸ್ಪತ್ರೆ ಸೇರಿಸುವುದು ಖಚಿತ. ಆದರೆ ಸಿನಿಮಾದಲ್ಲಿ ಹಿರೋಯಿನ್ ಮೆಚ್ಚಿಸಲು ಇದು ಸಹಜ…!!
ಇನ್ನು ರೋಮ್ಯಾನ್ಸ್ ಮಾಡುವಾಗ ಕಿಸ್ಸಿಂಗ್ ದೃಶ್ಯದ ಬದಲು ಹೂಗಳನ್ನು ತೋರಿಸುವುದು, ಹಿಮಪಾತವಾಗುತ್ತಿರುವಾಗ, ಹಿರೋಯಿನ್ ತುಂಡು ಉಡಿಗೆ ಅಥವಾ ತೆಳು ಸೀರೆಯಲ್ಲಿ ಡಾನ್ಸ್ ಮಾಡುತ್ತಾಳೆ. ಆದರೆ ಹೀರೋ ಮಾತ್ರ ಮೈತುಂಬಾ ಬಟ್ಟೆ ಹಾಕಿಕೊಂಡಿರುತ್ತಾರೆ. ಇನ್ನು ಇದಿಷ್ಟೇ ಅಲ್ಲ, ಆಕಾಶದಲ್ಲಿ ಕಾರು ಹಾರುವುದು, ಬೈಕ್ ನಿಂದ ಜಿಗಿಯುವುದು ಎಲ್ಲ ರೀಲ್ ಲೈಫ್‌ಗಷ್ಟೇ ಸೀಮಿತ ಹೊರೆತು ರಿಯಲ್ ಲೈಫ್‌ಗಲ್ಲ.