![Amid Coronavirus pandemic, Kajol returns to Mumbai with daughter Nysa from Singapore : Bollywood News - Bollywood Hungama](https://stat1.bollywoodhungama.in/wp-content/uploads/2020/03/Amid-Coronavirus-pandemic-Kajol-returns-to-Mumbai-with-daughter-Nysa-from-Singapore-111.jpg)
ವಿಶ್ವದ ಚಿತ್ರಣವನ್ನು ಕೊರೊನಾ ಬದಲಿಸಿದೆ. ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ಒಬ್ಬರನ್ನೂ ಕೊರೊನಾ ಬಿಟ್ಟಿಲ್ಲ. ಕೊರೊನಾದಿಂದಾಗಿ ಮಕ್ಕಳನ್ನು ಏಕಾಂಗಿಯಾಗಿ ಬೇರೆ ದೇಶದಲ್ಲಿ ಬಿಡಲು ಜನರು ಹೆದರುತ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ ಜೋಡಿ ಕಾಜೋಲ್ ಅಜಯ್ ದೇವಗನ್ ಕೂಡ ಸೇರಿದ್ದಾರೆ.
ಕಾಜೋಲ್ ಮಗಳು ನ್ಯಾಸಾ ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ. ಸದ್ಯ ಕೊರೊನಾ ಹಿನ್ನಲೆಯಲ್ಲಿ ಭಾರತಕ್ಕೆ ವಾಪಸ್ ಬಂದಿದ್ದಾಳೆ. ಆದ್ರೆ ವಿದ್ಯಾಭ್ಯಾಸಕ್ಕಾಗಿ ಸಿಂಗಾಪುರಕ್ಕೆ ವಾಪಸ್ ಆಗುವ ಅನಿವಾರ್ಯತೆಯಿದೆ. ಸಿಂಗಾಪುರಕ್ಕೆ ಮಗಳೊಬ್ಬಳನ್ನೇ ಕಳುಹಿಸಲು ಕಾಜೋಲ್ ಸಿದ್ಧವಿಲ್ಲ. ಇದೇ ಕಾರಣಕ್ಕೆ ಕಾಜೋಲ್ ಮಗಳ ಜೊತೆ ಸಿಂಗಾಪುರಕ್ಕೆ ಹೋಗುವ ತಯಾರಿ ನಡೆಸಿದ್ದಾರೆ.
ಕಾಜೋಲ್ ಕೆಲ ಸಮಯ ಮಗಳ ಜೊತೆ ಸಿಂಗಾಪುರದಲ್ಲಿರಲಿದ್ದಾರೆ. ಅಜಯ್ ದೇವಗನ್ ಮುಂಬೈನಲ್ಲಿ ಮಗ ಯುಗ್ ಜೊತೆ ಇರಲಿದ್ದಾರೆ. ಯಾವುದೇ ಕಾರಣಕ್ಕೂ ಮಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಕಾಜೋಲ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ನ್ಯಾಸಾ ಸಿಂಗಾಪುರದ ಆಗ್ನೇಯ ಏಷ್ಯಾದ ಯುನೈಟೆಡ್ ವರ್ಲ್ಡ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. 2018 ರಲ್ಲಿ ಅಜಯ್ ದೇವಗನ್ ಸಿಂಗಾಪುರದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.