ಬಾಲಿವುಡ್ ನಟಿ ಪ್ರೀತಿ ಜಿಂಟಾ ಐಪಿಎಲ್ಗಾಗಿ ದುಬೈಗೆ ತೆರಳಿದ್ದಾರೆ. ದುಬೈಗೆ ತೆರಳಿದ ಪ್ರೀತಿ ಸುಮಾರು ಮೂರು ಬಾರಿ ಕೊರೊನಾ ಪರೀಕ್ಷಿಗೊಳಗಾಗಿದ್ದಾಳೆ. ಮೂರು ಬಾರಿಯೂ ಪ್ರೀತಿ ಪರೀಕ್ಷಾ ವರದಿ ನಕಾರಾತ್ಮಕವಾಗಿ ಬಂದಿದೆ.
ಕೊರೊನಾ ಪರೀಕ್ಷೆ ನಂತ್ರ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯ ಹಂಚಿಕೊಂಡಿದ್ದಾರೆ. ನನಗೆ ಮೂರು ಬಾರಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ವರದಿ ನಕಾತ್ಮಕವಾಗಿ ಬಂದಿದೆ. ನನಗೆ ತುಂಬಾ ಸಂತೋಷವಾಗಿದೆ. ನಾನು ನಿರಾಳವಾಗಿದ್ದೇನೆಂದು ಪ್ರೀತಿ ಹೇಳಿದ್ದಾರೆ.
ಕೊರೊನಾ ಪರೀಕ್ಷೆ ಒಂದು ಅನುಭವ ನೀಡಿದೆ. ವೈದ್ಯರು ನನಗೆ ಸಹಾಯ ಮಾಡಿದ್ದಾರೆ. ಅವರಿಗೆ ಧನ್ಯವಾದವೆಂದು ಪ್ರೀತಿ ಹೇಳಿದ್ದಾರೆ. ದುಬೈಗೆ ತೆರಳಿರುವ ಪ್ರೀತಿ ಇನ್ನೂ ಆಟಗಾರರನ್ನು ಭೇಟಿಯಾಗಿಲ್ಲ. ಈಗ್ಲೂ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನೂ ಎರಡೂ ಪರೀಕ್ಷೆ ನಡೆಯಲಿದ್ದು, ನಂತ್ರ ನನಗೆ ಬಿಡುಗಡೆ ಸಿಗಲಿದೆ ಎಂದು ಪ್ರೀತಿ ಹೇಳಿದ್ದಾರೆ.