alex Certify ದೀಪಿಕಾ ಪಡುಕೋಣೆ ಮಾಸ್ಕ್ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ ಪಡುಕೋಣೆ ಮಾಸ್ಕ್ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ

ಕೊರೊನಾ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಕೊರೊನಾದಿಂದ ರಕ್ಷಣೆ ಪಡೆಯಲು ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಜನರಿಗೆ ಮಾಸ್ಕ್ ಧರಿಸುವಂತೆ ಕಡ್ಡಾಯವಾಗ್ತಿದ್ದಂತೆ ಮಾರುಕಟ್ಟೆಗೆ ಸಾಕಷ್ಟು ಮಾಸ್ಕ್ ಗಳು ಬಂದಿವೆ. 10 ರೂಪಾಯಿಯಿಂದ 500 ರೂಪಾಯಿ ಬೆಲೆಯ ಮಾಸ್ಕ್ ಕೂಡ ಇದೆ. ದಿನನಿತ್ಯದ ಬಳಕೆಗೆ ಜನರು ಹೆಚ್ಚಿನ ಬೆಲೆಯ ಮಾಸ್ಕ್ ಖರೀದಿಸಲು ಬಯಸುವುದಿಲ್ಲ. ಆದ್ರೆ ಬಾಲಿವುಡ್ ಸೆಲೆಬ್ರಿಟಿಗಳು ಮಾಸ್ಕ್ ಗೂ ಸಾವಿರಾರು ರೂಪಾಯಿ ನೀಡಲು ಸಿದ್ಧವಿರ್ತಾರೆ.

ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಮಾಸ್ಕ್ ಚರ್ಚೆಯಲ್ಲಿದೆ. ಇದು ಕಪ್ಪು ಬಣ್ಣದ ಮಾಸ್ಕ್ ಆಗಿದ್ದು, ಇದ್ರ ಬೆಲೆ ಕೇಳಿದ್ರೆ ತಲೆ ಸುತ್ತುತ್ತದೆ. ಅಸಲಿಗೆ ದೀಪಿಕಾ ಪಡುಕೋಣೆ ಪಾರ್ಟಿಯಲ್ಲಿ ಪಾಲ್ಕೊಳ್ಳಲು ಹೊರಟಿದ್ದ ವೇಳೆ ಈ ಮಾಸ್ಕ್ ಧರಿಸಿದ್ದರು. ಈ ಮಾಸ್ಕ್ ಬೆಲೆ ಒಂದು, ಎರಡು ಸಾವಿರವಲ್ಲ. ಬರೋಬ್ಬರಿ 25 ಸಾವಿರ ರೂಪಾಯಿ.

ಮಾಧ್ಯಮ ವರದಿಗಳ ಪ್ರಕಾರ, ದೀಪಿಕಾ Louis Vuitton ಕಂಪನಿ ಮಾಸ್ಕ್ ಧರಿಸಿದ್ದರು. ದುಬಾರಿ ಬೆಲೆ ಮಾಸ್ಕ್ ಗೆ ಇದು ಹೆಸರುವಾಸಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...