ಕೊರೊನಾ ಮಧ್ಯೆಯೇ ಚಿತ್ರದ ಶೂಟಿಂಗ್ ಶುರುವಾಗ್ತಿದೆ. ನಿಧಾನವಾಗಿ ಚಿತ್ರ ಜಗತ್ತು ತನ್ನ ಕೆಲಸಕ್ಕೆ ಮರಳುತ್ತಿದೆ. ಈ ಮಧ್ಯೆ ನಟಿ ದೀಪಿಕಾ ಪಡುಕೋಣೆ ಸುದ್ದಿಯಲ್ಲಿದ್ದಾರೆ. ದೀಪಿಕಾ, ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಈ ಚಿತ್ರಕ್ಕಾಗಿ ದೀಪಿಕಾ ಅತಿ ಹೆಚ್ಚು ಸಂಬಳ ಕೇಳಿದ್ದಾಳೆ ಎನ್ನಲಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ 20 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಲಿಂಗ ಸಮಾನತೆಯನ್ನು ಸಮರ್ಥಿಸಿಕೊಳ್ತಿರುವ ದೀಪಿಕಾ ನಟ, ನಟಿ ಇಬ್ಬರಿಗೂ ಸರಿಯಾದ ಸಂಭಾವನೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಚಿತ್ರದಲ್ಲೂ ದೀಪಿಕಾ ಸಂಭಾವನೆ ಪ್ರಭಾಸ್ ಸಂಭಾವನೆಗಿಂತ ಕಡಿಮೆಯಿದೆ. ಪ್ರಭಾಸ್ 50 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಪದ್ಮಾವತ್ ಚಿತ್ರದಲ್ಲಿ ದೀಪಿಕಾ 13 ಕೋಟಿ ಸಂಭಾವನೆ ಪಡೆದಿದ್ದರು.