ಬಾಲಿವುಡ್ನ ಕೆಲ ಸೆಲೆಬ್ರಿಟಿಗಳು ಭಾರತದ ಪೌರತ್ವ ಹೊಂದಿಲ್ಲ. ಅದ್ರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಕಾಣಿಸಿಕೊಳ್ಳುವ ಕೆಲವರು ಇಲ್ಲಿನ ಪೌರತ್ವ ಹೊಂದಿಲ್ಲ ಎಂಬುದು ಅಚ್ಚರಿಯಾದ್ರೂ ನಿಜ.
ಆರ್ಶರ್ಯ ಆಯ್ತಾ…..ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡಿಸ್, ಆಲಿಯಾ ಭಟ್, ಸನ್ನಿ ಲಿಯೋನ್, ನರ್ಗಿಸ್ ಫರ್ಕಿ ಸೇರಿದಂತೆ ಹಲವು ನಟ-ನಟಿಯರು ಭಾರತದ ಪೌರತ್ವ ಹೊಂದಿಲ್ಲ.
ನಟ ಅಕ್ಷಯ್ ಕುಮಾರ್ ಈ ಮೊದಲು ಕೆನಡಾದ ಪೌರತ್ವ ಹೊಂದಿದ್ದು, ಬಳಿಕ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಪದೇ ಪದೇ ಅಕ್ಷಯ್ ಕುಮಾರ್ ಅವರಿಗೆ ನೀವು ಭಾರತೀಯ ಅಲ್ಲ ಎಂಬ ಮಾತುಗಳನ್ನು ಕೇಳಿ ಅಂತಿಮವಾಗಿ ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ್ದರು.
ಕತ್ರೀನಾ ಕೈಫ್ ಕೂಡಾ ಭಾರತದಲ್ಲಿದ್ರೂ, ಅವರು ಮತದಾನ ಮಾಡುವಂತಿಲ್ಲ. ಕಾರಣ ಇವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ. ಇನ್ನು ನಿರ್ದೇಶಕ ಮಹೇಶ್ ಭಟ್ ಪುತ್ರಿ ಖ್ಯಾತ ನಟಿ ಆಲಿಯಾ ಭಟ್ ಕೂಡಾ ಭಾರತದಲ್ಲಿ ಮತ ಚಲಾಯಿಸುವಂತಿಲ್ಲ. ಕಾರಣ ಇವರ ತಾಯಿ ಸೋನಿ ರಜ್ದಾನ್ ಅವರು ಬ್ರಿಟನ್ ಮೂಲದವರಾದ್ದರಿಂದ ಆಲಿಯಾ ಕೂಡಾ ಆ ದೇಶದ ಪೌರತ್ವ ಪಡೆದಿದ್ದಾರೆ.