ಕನ್ನಡ ಹಾಗೂ ತೆಲಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. 2014ರಲ್ಲಿ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಈಗ ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ವಿವಿಧ ಪೋರ್ಟಲ್ ವರದಿ ಪ್ರಕಾರ, ರಶ್ಮಿಕಾ ಮಂದಣ್ಣ ನಿವ್ವಳ ಆಸ್ತಿ ಮೌಲ್ಯ 3 ಮಿಲಿಯನ್ ಡಾಲರ್. ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕಾ ಒಬ್ಬರು. ರಶ್ಮಿಕಾ ಒಂದು ಚಿತ್ರಕ್ಕೆ ಸುಮಾರು 65 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಚಿತ್ರಗಳು ಮಾತ್ರವಲ್ಲದೆ ಬ್ರಾಂಡ್ ಪ್ರಚಾರ, ಈವೆಂಟ್ ಗಳಿಂದಲೂ ನಟಿ ಗಳಿಸುತ್ತಾರೆ.
ನಟಿ ಗ್ಯಾರೇಜ್ ನಲ್ಲಿ ಐಷಾರಾಮಿ ಕಾರುಗಳು ಸಾಕಷ್ಟಿವೆ. ರೇಂಜ್ ರೋವರ್ ಎಸ್ಯುವಿಯಿಂದ ಆಡಿ ಕ್ಯೂ 3 ವರೆಗೆ ರಶ್ಮಿಕಾ ಇತ್ತೀಚಿನ ಎಲ್ಲ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರಶ್ಮಿಕಾ ಮಂದಣ್ಣ ಈ ವರ್ಷದ ಆರಂಭದಲ್ಲಿ ರೇಂಜ್ ರೋವರ್ ಎಸ್ಯುವಿ ಖರೀದಿಸಿದ್ದಾರೆ. ಈ ಕಾರಿನ ಬೆಲೆ ಅಂದಾಜು 1 ಕೋಟಿ ರೂಪಾಯಿ. 2017ರಲ್ಲಿ ಆಡಿ ಕ್ಯೂ 3 ಕಾರು ಖರೀದಿಸಿದ್ದು, ಇದ್ರ ಬೆಲೆ 34.97 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿ 43.61 ಲಕ್ಷ ರೂಪಾಯಿವರೆಗಿದೆ. ರಶ್ಮಿಕಾ ಮರ್ಸಿಡಿಸ್ ಬೆಂಜ್- ಸಿ ಕಾರನ್ನು ಹೊಂದಿದ್ದು, ಕಾರಿನ ಬೆಲೆ ಸುಮಾರು 50 ಲಕ್ಷ ರೂಪಾಯಿ. ಇದಲ್ಲದೆ ರಶ್ಮಿಕಾ ಟೊಯೋಟಾ ಇನ್ನೋವಾ, ಹ್ಯುಂಡೈ ಕ್ರೆಟಾ ಕಾರನ್ನು ಹೊಂದಿದ್ದಾರೆ.
https://www.instagram.com/p/CJs_z5WJ-3Y/?utm_source=ig_embed