ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಶುರುವಾಗಲಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ‘ಬಿಗ್ ಬಾಸ್’ 8ನೇ ಸೀಸನ್ ಮುಕ್ತಾಯವಾಗಿತ್ತು. ಮಂಜು ಪಾವಗಡ ವಿಜೇತರಾಗಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ 9ನೇ ಸೀಸನ್ ಆಗಸ್ಟ್ ನಲ್ಲಿ ಆರಂಭವಾಗಲಿದ್ದು, ವೂಟ್ ಸೆಲೆಕ್ಟ್ ಮತ್ತು ಕಲರ್ಸ್ ವಾಹಿನಿಯಲ್ಲಿ ಎರಡು ರೀತಿಯ ‘ಬಿಗ್ ಬಾಸ್’ ಸೀಸನ್ ಗಳನ್ನು ಪ್ರಸಾರ ಮಾಡುವ ಚಿಂತನೆ ನಡೆದಿದೆ. ಈ ಬಾರಿ ವಿಭಿನ್ನವಾಗಿ ‘ಬಿಗ್ ಬಾಸ್’ ಹೊರ ತರಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಈ ಸಲ ಎರಡು ಸೀಸನ್ ನಲ್ಲಿ ‘ಬಿಗ್ ಬಾಸ್’ ನಡೆಯಲಿದೆ ಒಂದು ಮಿನಿ ಸೀಸನ್, ಮತ್ತೊಂದು ದೊಡ್ಡ ಸೀಸನ್. ವೂಟ್ ನಲ್ಲಿ ಪ್ರಸಾರವಾಗುವ ಮಿನಿ ಸೀಸನ್ ಆಗಸ್ಟ್ ನಿಂದ ಅಕ್ಟೋಬರ್ ವರೆಗೆ 42 ದಿನ ನಡೆಯಲಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ದೊಡ್ಡ ಸೀಸನ್ ಎಂದಿನಂತೆ ಪ್ರಸಾರವಾಗಲಿದ್ದು, 100 ದಿನ ನಡೆಯಲಿದೆ. ಸುದೀಪ್ ಅವರು ಎರರೂ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಮಿನಿ ಸೀಸನ್ ನಲ್ಲಿ ಸಾಮಾಜಿಕ ಜಾಲತಾಣಗಳ ಸೆಲೆಬ್ರಿಟಿಗಳು, ಇಂಟರ್ ನೆಟ್ ಸ್ಟಾರ್ ಗಳು, ಇನ್ ಫ್ಲ್ಯುಯೆನ್ಸರ್ ಗಳು ಪಾಲ್ಗೊಳ್ಳಲಿದ್ದಾರೆ. ಅವರಲ್ಲಿ ನಾಲ್ಕೈದು ಜನ ಟಿವಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ. ರಾಜ್ಯದ ಅನೇಕ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ.