
ಲಾಕ್ಡೌನ್ ಇಲ್ಲದಿದ್ದರೆ ಈ ವೇಳೆಗೆ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹೊಸ ಸೀಸನ್ ಆರಂಭವಾಗಬೇಕಿತ್ತು.
‘ಬಿಗ್ ಬಾಸ್’ ಸೀಸನ್ -14 ರಿಯಾಲಿಟಿ ಶೋ ನಿರೂಪಣೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ತಯಾರಿ ನಡೆಸಿದ್ದಾರೆ. ಪನ್ವೆಲ್ ಫಾರ್ಮ್ ಹೌಸ್ ನಿಂದ ಪ್ರೊಮೋ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಬಿಗ್ ಬಾಸ್’ ಆರಂಭವಾಗಿರಲಿಲ್ಲ.
ಈಗ ಹೊಸ ಸೀಸನ್ ಆರಂಭಕ್ಕೆ ಸಿದ್ಧತೆ ಕೈಗೊಂಡಿದ್ದು ಸೋಂಕು ನಿಯಂತ್ರಣಕ್ಕೆ ಬಂದಲ್ಲಿ ಅಕ್ಟೋಬರ್ ಮೊದಲ ವಾರದಿಂದ ‘ಬಿಗ್ ಬಾಸ್’ ಸೀಸನ್ 14 ಆರಂಭವಾಗಲಿದೆ ಎನ್ನಲಾಗಿದೆ.