ಬೆಂಗಳೂರು: ರಾಜ್ಯದಲ್ಲಿ ಮೊದಲ ದಿನದ ನೈಟ್ ಕರ್ಫ್ಯೂ ಮುಕ್ತಾಯವಾಗಿದೆ. ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಕೆಲವರು ಕಿರಿಕ್ ಪಾರ್ಟಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಸುರೇಶ್ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ಎಂಜಿ ರಸ್ತೆಯ ಪಬ್ ವೊಂದಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ದಿವ್ಯಾ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಾರೆ. ಮನೆಗೆ ತೆರಳಿ ಎಂದು ಹೇಳಿದ್ದಕ್ಕೆ ಪೊಲೀರೊಂದಿಗೆ ವಾಗ್ವಾದ ನಡೆಸಿ ರಂಪಾಟ ಮಾಡಿದ್ದಾರೆ.
ಪೊಲೀಸರು ತಪಾಸಣೆ ವೇಳೆ ಸಿಕ್ಕಿಕೊಂಡ ಅವರು ರಂಪಾಟ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.