ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 7 ರಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೊಟೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸ್ನೇಹಿತರಾದ ಉದ್ಯಮಿ ನಾಗಾರ್ಜುನ ಅವರೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಕಳೆದ ವರ್ಷ ಪರಿಚಿತರಾಗಿದ್ದ ಚೈತ್ರಾ ಕೊಟೂರು ಮತ್ತು ನಾಗಾರ್ಜುನ ಪ್ರೀತಿಸಿದ್ದು, ಸರಳವಾಗಿ ಮದುವೆಯಾಗಿದ್ದಾರೆ. ಸಿಂಪಲ್ ಮ್ಯಾರೇಜ್ ನನ್ನ ಉದ್ದೇಶವಾಗಿತ್ತು. ಇಬ್ಬರು ಸೇರಿ ನಿರ್ಧಾರ ತೆಗೆದುಕೊಂಡೆವು ಎಂದು ಚೈತ್ರ ಕೊಟೂರ್ ತಿಳಿಸಿದ್ದಾರೆ. ಬರಹಗಾರ್ತಿ, ರಂಗಭೂಮಿ ಕಲಾವಿದೆ, ಸಿನಿಮಾ ನಟಿಯಾಗಿಯೂ ಚೈತ್ರ ಕೊಟೂರು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಆಲ್ಬಂ ಸಾಂಗ್ ನಿರ್ದೇಶನ ಮಾಡಿದ್ದಾರೆ.