ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಈ ಬಾರಿ ಶಾಕ್ ನೀಡಿದ್ದಾರೆ. ಬಿಗ್ ಬಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿರುವ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಬಿಗ್ ಬಿ, ಆರೋಗ್ಯ ಅಷ್ಟಾಗಿ ಸರಿಯಿಲ್ಲ, ಸರ್ಜರಿ…ಹಾಗಾಗಿ ಈಗ ಬ್ಲಾಗ್ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಒಂದು ಲೈನ್ ನಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಿಗೆ ಸರ್ಜರಿ ಆಗಿದೆಯೇ ಅಥವಾ ಆಗಬೇಕಿದೆಯೇ? ಅವರ ಅನಾರೋಗ್ಯಕ್ಕೆ ಕಾರಣವೇನು ಎಂಬ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ ಅಭಿಮಾನಿಗಳ ಆತಂಕ ಇಮ್ಮಡಿಯಾಗಿದೆ.
ಮಾರ್ಚ್ 27 ರಂದು ಕರ್ನಾಟಕ ಬಂದ್ ಗೆ ಕರೆ –ವಾಟಾಳ್ ನಾಗರಾಜ್ ಎಚ್ಚರಿಕೆ
ತಮ್ಮ ಆರೋಗ್ಯದ ಬಗ್ಗೆಯಾಗಲಿ, ಮುಂದಿನ ಚಿತ್ರದ ಬಗ್ಗೆಯಾಗಲಿ ಸುದೀರ್ಘವಾಗಿ ಬ್ಲಾಗ್ ನಲ್ಲಿ ಬರೆಯುವ ಬಿಗ್ ಬಿ, ಈ ಬಾರಿ ಕೇವಲ ಒಂದು ಲೈನ್ ನಲ್ಲಿ ಅನಾರೋಗ್ಯ ಎಂದು ಹೇಳಿ ಮೌನವಾಗಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ. ಪ್ರಸ್ತುತ ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ಆದರೆ ಅಮಿತಾಬ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ.