alex Certify BIG NEWS: ದರ್ಶನ್ ಬಳಸಿದ ‘ಆ ಒಂದು ಪದದಿಂದ ತುಂಬಾ ಬೇಸರವಾಗಿದೆ’; ‘ಡಿ’ ಬಾಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜೋಗಿ ಪ್ರೇಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದರ್ಶನ್ ಬಳಸಿದ ‘ಆ ಒಂದು ಪದದಿಂದ ತುಂಬಾ ಬೇಸರವಾಗಿದೆ’; ‘ಡಿ’ ಬಾಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜೋಗಿ ಪ್ರೇಮ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪದ ಬಳಕೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ನಟ, ನಿರ್ದೇಶಕ ಜೋಗಿ ಪ್ರೇಮ್, ‘ಪುಡಾಂಗ್’ ಎಂದು ನನ್ನ ಬಗ್ಗೆ ಹೇಳಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್, ದರ್ಶನ್ ನನಗೆ ಹಾಗೂ ರಕ್ಷಿತಾ ಇಬ್ಬರಿಗೂ ಆತ್ಮೀಯ ಸ್ನೇಹಿತ. ಆದರೆ ಆತ ಬಳಸಿದ ಪದ ಪ್ರಯೋಗದಿಂದ ನಮ್ಮಿಬ್ಬರಿಗೂ ಬೇಸರವಾಗಿದೆ. ’ಜೋಗಿ ಪ್ರೇಮ್ ಪುಡಾಂಗು’ ಎಂದು ಹೇಳಿರುವುದು ತುಂಬಾ ಹರ್ಟ್ ಆಗಿದೆ. ಅವರು ಯಾಕೆ ಹಾಗೆ ಹೇಳಿದ್ರು ಎಂದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಯಾಣಿಕರಿಗೆ KSRTC ಸಿಹಿ ಸುದ್ದಿ: ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ವಿಶೇಷ ಪ್ರವಾಸ ಪ್ಯಾಕೇಜ್

ದರ್ಶನ್ ಅವರಿಗೆ ನಿರ್ಮಾಪಕ ಉಮಾಪತಿ ಪರಿಚಯಿಸಿದ್ದೇ ನಾನು. ಅವರಿಬ್ಬರು ಚರ್ಚಿಸಿ ದರ್ಶನ್ ಉಮಾಪತಿಗೆ ಸಿನಿಮಾಗೆ ಡೇಟ್ ಕೊಟ್ಟರು. ರಾಬರ್ಟ್ ನಂತಹ ಒಳ್ಳೆಯ ಸಿನಿಮಾ ಮಾಡಿದರು. ಆ ವೇಳೆ ನಾನು ನನ್ನ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದೆ. ನನ್ನ ದರ್ಶನ್ ಸ್ನೇಹವೇ ಬೇರೆ, ಸಿನಿಮಾನೇ ಬೇರೆ, ಇನ್ನು ನಿರ್ಮಾಪಕರ ಹಾಗೂ ದರ್ಶನ್ ವ್ಯವಹಾರಗಳೇ ಬೇರೆ. ನನಗೂ ಹಾಗೂ ಇತ್ತೀಚಿನ ಅವರ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ದರ್ಶನ್ ಬಳಸಿದ ’ಪುಡಾಂಗು’ ಎಂಬ ಪದಬಳಕೆ ಮಾಡಿದ್ದಕ್ಕೆ ಮಾತ್ರ ನಾನು ಪ್ರತಿಕ್ರಿಯಿಸುತ್ತಿದ್ದೇನೆ ಇದಕ್ಕೆ ಬಹಳ ಬೇಸರವಾಗಿದೆ. ಆತ್ಮೀಯ ಸ್ನೇಹಿತನಾಗಿ ನನ್ನ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ. ದರ್ಶನ್ ಹೇಳಿಕೆಗೆ ಅವರ ಅಭಿಮಾನಿಗಳೇ ನನ್ನ ಬಳಿ ಕರೆ ಮಾಡಿ, ಮೆಸೇಜ್ ಮಾಡಿ ಕ್ಷಮೆ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...