alex Certify BIG NEWS: ಥಿಯೇಟರ್ ಗಳಿಗೆ ಮಾತ್ರ ಶೇ.50ರಷ್ಟು ನಿಯಮ – ನಿರ್ಧಾರ ಕೈಬಿಡುವಂತೆ ಸರ್ಕಾರಕ್ಕೆ ಪವರ್ ಸ್ಟಾರ್ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಥಿಯೇಟರ್ ಗಳಿಗೆ ಮಾತ್ರ ಶೇ.50ರಷ್ಟು ನಿಯಮ – ನಿರ್ಧಾರ ಕೈಬಿಡುವಂತೆ ಸರ್ಕಾರಕ್ಕೆ ಪವರ್ ಸ್ಟಾರ್ ಆಗ್ರಹ

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಅದರಲ್ಲೂ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಚಿತ್ರರಂಗ ಆಕ್ರೋಶ ವ್ಯಕ್ತಪಡಿಸಿದೆ.

ಥಿಯೇಟರ್ ಗಳಿಗೆ ಮಾತ್ರ ಶೇ. 50ರಷ್ಟು ಜನರಿಗೆ ಅವಕಾಶ ವಿಚಾರವಾಗಿ ಮಾತನಾಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿತ್ರರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಒಂದು ಬಾರಿಯ ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ಸಿನಿರಂಗವೇ ಬಂದ್ ಆಗಿತ್ತು. ಈಗಷ್ಟೇ ಮತ್ತೆ ಕೆಲಸಗಳು ಆರಂಭವಾಗುತ್ತಿವೆ. ಹೀಗಿರುವಾಗ ಈಗ ಥಿಯೇಟರ್ ಗಳಿಗೆ ಶೇ.50ರಷ್ಟು ಅವಕಾಶ ನೀಡಿದರೆ ಸಿನಿಮಾದವರ ಬದುಕು ದುಸ್ಥರವಾಗುತ್ತದೆ. ಇಂಥಹ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಹೇಳಿದ್ದಾರೆ.

‘ವಿರಾಟ ಪರ್ವಂ’ ಚಿತ್ರದ ಟೀಸರ್ ರಿಲೀಸ್

ಥಿಯೇಟರ್ ಗಳಿಗೆ ಶೇ.50ರಷ್ಟು ನಿಯಮ ಬೇಡ. ಶೇ100ರಷ್ಟು ಅವಕಾಶ ನೀಡಿ. ಅಭಿಮಾನಿಗಳು, ಪ್ರೇಕ್ಷಕರು ಕೋವಿಡ್ ನಿಯಮಗಳನ್ನು ಪಾಲಿಸಿ, ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಥಿಯೇಟರ್ ಗೆ ಬರಲಿ. ಥಿಯೇಟರ್ ಗಳಿಗೆ ಮಾತ್ರ ಶೇ.50ರಷ್ಟು ನಿಯಮ ಯಾಕೆ? ರಾಜಕೀಯ ರ್ಯಾಲಿ, ಸಭೆ-ಸಮಾರಂಭಗಳನ್ನೂ ಬಂದ್ ಮಾಡಲಿ. ಸರ್ಕಾರದ ಈ ನಿರ್ಧಾರದಿಂದ ಇಡೀ ಸಿನಿಮಾ ಕ್ಷೇತ್ರಕ್ಕೆ ತೊಂದರೆಯಾಗುತ್ತದೆ. ಸರ್ಕಾರ ಈ ನಿಯಮ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...