ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್’ ಚಿತ್ರಕ್ಕೆ ತೊಂದರೆಯಾಗಿಲ್ಲ. ‘ಜೇಮ್ಸ್’ ಚಿತ್ರಕ್ಕೂ ‘ಕಾಶ್ಮೀರ್ ಫೈಲ್ಸ್’ ಗೂ ಯಾವುದೇ ಸಂಬಂಧವಿಲ್ಲ, ಆದರೆ, ನಮ್ಮ ಭಾಷೆಯ ವಿಚಾರ ಬಂದಾಗ ನಮ್ಮ ಸಿನಿಮಾಗಳನ್ನು ನಾವು ಉಳಿಸಿಕೊಳ್ಳಬೇಕು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಫಿಲ್ಮ್ ಚೇಂಬರ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ, ‘ಜೇಮ್ಸ್’ ಚಿತ್ರದ ಸಮಸ್ಯೆ ಬಗ್ಗೆ ಸಿಎಂ ಜತೆ ಚರ್ಚಿಸಲಾಗಿದೆ. ಸಿಎಂ ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಎಲ್ಲರ ಪ್ರಯತ್ನದಿಂದಾಗಿ ಸಮಸ್ಯೆ ಬಗೆಹರಿದಿದೆ ಎಂದರು.
ಚಲಿಸುತ್ತಿದ್ದ ಬಸ್ನಲ್ಲಿ ಶಾಲಾ ಸಹಪಾಠಿಗಳ ಎಣ್ಣೆ ಪಾರ್ಟಿ : ವಿಡಿಯೋ ವೈರಲ್ ಬಳಿಕ ಖಾಕಿ ಅಲರ್ಟ್
ಸಣ್ಣಪುಟ್ಟ ಸಮಸ್ಯೆ ಬಗೆಹರಿಸಿಕೊಂಡು ಮುಂದುವರೆಯಬೇಕು. ತಪ್ಪು ಹುಡುಕುವುದು ಬೇಡ. ‘ಜೇಮ್ಸ್’ ಅಪ್ಪು ಸಿನಿಮಾ. ಅದೊಂದು ಎಮೋಷ್ನಲ್. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಯಾರೂ ಕೂಡ ಪ್ರತಿಭಟನೆಗೆ ಮುಂದಾಗಬಾರದು ಎಂದು ಹೇಳಿದರು.