ಟಿವಿ ರಿಯಾಲಿಟಿ ಶೋ ‘ಲಾಕ್ ಅಪ್’ ನಿಂದ ನಿರ್ಗಮಿಸುವ ಸಂದರ್ಭದಲ್ಲಿ ರಾಬರ್ಟ್ ವಾದ್ರಾ ಅವರ ಸಂಬಂಧಿ, ನಾನು ಖ್ಯಾತ ಕೈಗಾರಿಕೋದ್ಯಮಿಯೊಬ್ಬನ ಪತ್ನಿಯೊಂದಿಗೆ ಮಲಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಸಂಬಂಧಿ ತೆಹ್ಸೀನ್ ಪೂನಾವಾಲಾ ಅವರು ದೇಶದ ಪ್ರಮುಖ ಕೈಗಾರಿಕೋದ್ಯಮಿಯ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಶನಿವಾರ(ಮಾರ್ಚ್ 12) ರಿಯಾಲಿಟಿ ಟಿವಿ ಶೋ ‘ಲಾಕ್ ಅಪ್’ ನಿಂದ ಹೊರಹಾಕಲ್ಪಟ್ಟ ನಂತರ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
ಶೋ ನಿಯಮಗಳ ಪ್ರಕಾರ, ವೈಯಕ್ತಿಕ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ಸ್ಪರ್ಧಿಗಳಲ್ಲಿ ಒಬ್ಬರನ್ನು ಎಲಿಮಿನೇಟ್ ಆಗದಂತೆ ರಕ್ಷಿಸಲು ತೆಹ್ಸೀನ್ ಪೂನಾವಾಲಾ ಅವರಿಗೆ ಅವಕಾಶ ನೀಡಲಾಗಿತ್ತು. ಆಗ ರಾಬರ್ಟ್ ವಾದ್ರಾ ಅವರ ಸಂಬಂಧಿ ತೆಹ್ಸೀನ್, ತನ್ನ ಟ್ರಾನ್ಸ್ ಫ್ರೆಂಡ್ ಸೈಶಾ ಶಿಂಧೆ(ಹಿಂದೆ ಸ್ವಪ್ನಿಲ್ ಎಂದು ಕರೆಯಲಾಗುತ್ತಿತ್ತು) ರಕ್ಷಿಸಲು ಈ ಬಗ್ಗೆ ಹೇಳಿಕೊಂಡಿದ್ದಾರೆ.
ಭಾರತದ ಖ್ಯಾತ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಪತ್ನಿಯೊಂದಿಗೆ ಮಲಗಲು ನನ್ನ ಬಳಿ ಪ್ರಸ್ತಾಪ ಮಾಡಿದರು. ಅದಕ್ಕಾಗಿ ಅವರು ವಾರಾಂತ್ಯದಲ್ಲಿ ನೈಟ್ ಕ್ಲಬ್ ಅನ್ನು ಬುಕ್ ಮಾಡಿದ್ದರು. ನಾನು ಅವನ ಹೆಂಡತಿಯೊಂದಿಗೆ ಸಂಭೋಗಿಸುವದನ್ನು ನೋಡಲು ಅವನು ಬಯಸಿದ್ದರು ಎಂದು ತೆಹ್ಸೀನ್ ಹೇಳಿದ್ದಾರೆ.
ಶೋ ಹೋಸ್ಟ್ ಕಂಗನಾ ರಣಾವತ್ ಅವರು ಈ ಬಗ್ಗೆ ಪ್ರಶ್ನಿಸಿ, ಲೈಂಗಿಕ ವಿಚಾರದ ಬಗ್ಗೆ ಕೇಳಿದಾಗ, ನಾನು ಅದನ್ನು ಸಂಪೂರ್ಣವಾಗಿ ಆನಂದಿಸಿದೆ. ಕೈಗಾರಿಕೋದ್ಯಮಿ ದೂರದಲ್ಲಿದ್ದರು. ಅವರೊಬ್ಬರು ಮಾತ್ರ ನೋಡುತ್ತಿದ್ದರು. ಅವನು ಮಧ್ಯಪ್ರವೇಶಿಸಬಾರದೆನ್ನುವುದು ನನ್ನ ಏಕೈಕ ಷರತ್ತು ಆಗಿತ್ತು. ಅವನು ದೂರದಿಂದ ಮಾತ್ರ ನೋಡುತ್ತಿದ್ದ ಎಂದು ಪೂನಾವಾಲಾ ತಿಳಿಸಿದ್ದಾರೆ.
ಅವನ ಹೆಂಡತಿಯದು ಏನೂ ತಪ್ಪಿಲ್ಲದ ಕಾರಣ ಅದನ್ನು ಹಂಚಿಕೊಳ್ಳಲು ನನಗಿಷ್ಟವಿಲ್ಲ. ನಾನು ಅವರ ಹೆಂಡತಿಯನ್ನು ನನ್ನ ಆಸ್ತಿಯಂತೆ ನೋಡಬೇಕೆಂದು ಅವರು ಬಯಸಿದ್ದರು. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಹೇಳಿದ ತೆಹ್ಸೀನ್ ಪೂನವಾಲಾ ತನ್ನನ್ನು ಸಮರ್ಥಿಸಿಕೊಂಡರು. ಇದರ ಬಗ್ಗೆ ವಿಷಾದಿಸುವುದಿಲ್ಲ ಎಂದು ಹೇಳಿದ್ದಾರೆ.
ಆಭರಣ ಕ್ಯುರೇಟರ್ ಮೋನಿಕಾ ವಡೇರಾ ಅವರನ್ನು ಮದುವೆಯಾಗುವ ಮೊದಲು ಕೈಗಾರಿಕೋದ್ಯಮಿಯ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕ ನಡೆದಿತ್ತು ಎಂದು ಅವರು ಹೇಳಿದ್ದಾರೆ. ಮೋನಿಕಾ ವಡೇರಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಸೋದರ ಸಂಬಂಧಿಯಾಗಿದ್ದಾರೆ. ಅವರು ಡೇಟಿಂಗ್ ನಲ್ಲಿದ್ದಾಗ ತಮ್ಮ ಹೆಂಡತಿಯ ಬಳಿ ಅದೇ ವಿಷಯವನ್ನು ಒಪ್ಪಿಕೊಂಡರು ಎಂದು ಹೇಳಿಕೊಂಡಿದ್ದಾರೆ.
ರಿಯಾಲಿಟಿ ಶೋ ‘ಲಾಕ್ ಅಪ್’ 16 ಸ್ಪರ್ಧಿಗಳನ್ನು ಹೊಂದಿದೆ, ಅವರನ್ನು 72 ದಿನಗಳ ಅವಧಿಗೆ ವಿಭಿನ್ನ ಮೇಕ್-ಶಿಫ್ಟ್ ಜೈಲುಗಳಲ್ಲಿ ಜೋಡಿಯಾಗಿ ಇರಿಸಲಾಗುತ್ತದೆ. ಆ ಸಮಯದಲ್ಲಿ, ಸ್ಪರ್ಧಿಗಳು ತಮ್ಮ ನಡುವೆ ಜಗಳವಾಡುವುದನ್ನು ಕಾಣಬಹುದು. ಪ್ರದರ್ಶನವು ತುಂಬಾ ನಾಟಕೀಯವಾಗಿದೆ, ಸ್ಪರ್ಧಿಗಳು ಲಾಕಪ್ ನಲ್ಲಿ ಬದುಕಲು ಸವಾಲಿನ ಕಾರ್ಯಗಳನ್ನು ಪಡೆಯುತ್ತಾರೆ.
https://youtu.be/D9nNyY2zC8o