ಜನಪ್ರಿಯ ರಿಯಾಲಿಟಿ ಶೋ ’ಕೌನ್ ಬನೇಗಾ ಕರೋಡ್ಪತಿ’ಯಲ್ಲಿ ಐದು ಕೋಟಿ ರೂ.ಗಳ ಬಹುಮಾನ ಗೆದ್ದ ಮೊದಲ ಸ್ಫರ್ಧಿ ಎಂಬ ಹೆಗ್ಗಳಿಕೆಯ ಸುಶೀಲ್ ಕುಮಾರ್, ಫೇಮಸ್ ವ್ಯಕ್ತಿಯಾಗಿರುವುದಕ್ಕಿಂತ ಒಳ್ಳೆಯ ವ್ಯಕ್ತಿಯಾಗಿರುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಿಹಾರ ಮೂಲದವರಾದ ಸುಶೀಲ್ ಕುಮಾರ್, 2011ರಲ್ಲಿ ಇದೇ ಗೇಮ್‌ನಲ್ಲಿ ತೆರಿಗೆ ಕಳೆದು 3.6 ಕೋಟಿ ರೂ.ಗಳನ್ನು ಗೆದ್ದುಕೊಂಡಿದ್ದರು. ಸ್ಥಳೀಯ ಮಟ್ಟದಲ್ಲಿ ಸೆಲೆಬ್ರಿಟಯಾಗಿದ್ದ ಕಾರಣ ತಮಗೆ ಪ್ರತಿ ತಿಂಗಳು 10-15 ದಿನಗಳ ಮಟ್ಟಿಗೆ ಸಮಾರಂಭಗಳಲ್ಲಿ ಭಾಗಿಯಾವುದೇ ಕೆಲಸವಾಗಿಬಿಟ್ಟಿತ್ತು ಎನ್ನುತ್ತಾರೆ ಸುಶೀಲ್.
“KBC ಬಳಿಕ ನಾನು ಪ್ರತಿ ತಿಂಗಳೂ ಸಹ ಸುಮಾರು 50 ಸಾವಿರ ರೂ.ಗಳಷ್ಟು ದುಡ್ಡನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದೆ. ಈ ಕಾರಣದಿಂದ ಕೆಲ ಚಾಣಾಕ್ಷ ಮಂದಿ ನನ್ನ ಬಳಿ ಬಂದು ನನಗೆ ಬಹಳಷ್ಟು ಬಾರಿ ಮೋಸ ಮಾಡಿಬಿಟ್ಟರು. ಇದು ನನಗೆ ಬಹಳ ಸಮಯದ ನಂತರ ಅರಿವಿಗೆ ಬರುತ್ತಿತ್ತು” ಎಂದಿರುವ ಸುಶೀಲ್, ತಮ್ಮ ಜೀವನ ಬಗ್ಗೆ ಸಾಕಷ್ಟು ವಿವರಗಳನ್ನು ತಮ್ಮ ಫೇಸ್ಬುಕ್ ಪೇಜ್, ’Mantu Kumar Sushil’ ನಲ್ಲಿ ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಚೇನ್ ಸ್ಮೋಕರ್ ಹಾಗೂ ವಿಪರೀತ ಕುಡುಕನಾಗಿಬಿಟ್ಟಿದ್ದ ತಾವು, ಕಳೆದ ನಾಲ್ಕು ವರ್ಷಗಳಿಂದ ಕುಡಿತ ಬಿಟ್ಟಿದ್ದು, ಕಳೆದೊಂದು ವರ್ಷದಿಂದ ಧೂಮಪಾನವನ್ನೂ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
https://www.facebook.com/permalink.php?story_fbid=1194040024310538&id=100011136544077