alex Certify ತಡರಾತ್ರಿ ಸ್ನೇಹಿತೆ ಜೊತೆಯಲ್ಲಿದ್ದಾಗಲೇ ನಟಿ ಮೇಲೆ ಹಲ್ಲೆ: ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಸ್ನೇಹಿತೆ ಜೊತೆಯಲ್ಲಿದ್ದಾಗಲೇ ನಟಿ ಮೇಲೆ ಹಲ್ಲೆ: ಆರೋಪಿ ಅರೆಸ್ಟ್

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ನಟಿ ಮೇಲೆ ಹಲ್ಲೆ ನಡೆಸಲಾಗಿದ್ದು, ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಅನುಷಾ ಸ್ನೇಹಿತೆಯೊಂದಿಗೆ ಇದ್ದಾಗಲೇ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಿದ್ದು ಮೊಬೈಲ್ ಕರೆ ಆಧರಿಸಿ ಆತನನ್ನು ಪೊಲೀಸರು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದ ಚಂದನ್ ಪ್ರಸಾದ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ನಟಿ ಅನುಷಾ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಅನುಷಾ ಆರು ವರ್ಷಗಳ ಹಿಂದೆ ಸೋಲದೇವನಹಳ್ಳಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಚಂದನ್ ಪರಿಚಯವಾಗಿದ್ದು, ಇಬ್ಬರು ಆತ್ಮೀಯರಾಗಿದ್ದರು. ನಂತರದಲ್ಲಿ ಪ್ರೀತಿಸುವಂತೆ ಚಂದನ್ ಬಲವಂತ ಮಾಡಿದ್ದರಿಂದ ಅನುಷಾ ಪ್ರೀತಿಗೆ ಒಪ್ಪಿಕೊಂಡಿದ್ದರು. ಎರಡು ತಿಂಗಳಲ್ಲೇ ಇಬ್ಬರ ನಡುವೆ ಬಿರುಕು ಮೂಡಿದ್ದು, ಇದರಿಂದ ಆರೋಪಿ ಆಕ್ರೋಶಗೊಂಡ ಚಂದನ್ ಅನುಷಾ ಮೇಲೆ ಹಲ್ಲೆ ಮಾಡಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.

ಈತನ ಕಾಟ ತಾಳದೇ ಅನುಷಾ ಕುಟುಂಬದವರು ತುಮಕೂರಿಗೆ ವಾಸ್ತವ್ಯ ಬದಲಿಸಿದ್ದರು. ಅಲ್ಲಿಯೂ ಆತನ ಕಾಟ ಹೆಚ್ಚಿದ್ದರಿಂದ ನಾಗರಭಾವಿಗೆ ಬಂದು ನೆಲೆಸಿದ್ದರು. ಅಕ್ಟೋಬರ್ 19 ರಂದು ರಾತ್ರಿ 1 ಗಂಟೆ ವೇಳೆಗೆ ನಾಗರಬಾವಿಯ ಅನುಷಾ ಮನೆ ಬಳಿ ಬಂದಿದ್ದ ಆರೋಪಿ ಕರೆ ಮಾಡಿ ಕೆಳಗೆ ಬರುವಂತೆ ಬಲವಂತ ಮಾಡಿದ್ದಾನೆ. ಇಲ್ಲದಿದ್ದರೆ ತಾನೇ ಮನೆಗೆ ನುಗ್ಗುವುದಾಗಿ ಬೆದರಿಕೆ ಹಾಕಿದ್ದಾನೆ. ಆಗ ಅನುಷಾ ಸ್ನೇಹಿತೆಯೊಂದಿಗೆ ಕ್ಯಾಬ್ ನಲ್ಲಿ ತೆರಳಲು ಹೊರಟಾಗ ಚಂದನ್ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy pro domácnost, vaření a zahradničení: objevte nejlepší triky a recepty pro každodenní život! Tři skvělá 10 věcí, které rozhodně nelze prát v Jak rychle vyčistit velmi silné ucpaní potrubí: tipy od Jak se zbavit nepříjemného Neobvyklý recept: Kotlety se Jak pracovat s oblečením: tipy a triky, které Proč byste neměli zabíjet pavouky: vědecké, biblické a lidové perspektivy Jak prát kuchyňské utěrky: 7 Budete zhubnout, když budete každý den jíst přírodní jogurt? Psychologové identifikovali nejnebezpečnější typy sebeklamů, které ničí životy. 5 tipů, jak ušetřit peníze s myčkou nádobí: Proč slepice nenesou Tipy, jak šetřit život při úsporném vytápění 2 lžíce tohoto produktu a váš kohoutek Jak využít staré ponožky ve Vynikající výsledky Nejpřesnějšího testu osobnosti: Zjistěte, kdo jste opravdu Nosič nebezpečný: 4 věci, které byste neměli nosit každý den Chcete zjistit nové triky, jak ušetřit čas v kuchyni nebo zlepšit svůj záhradní trénink? Navštivte náš web plný užitečných tipů a triků pro každodenní život! Zde najdete nejnovější informace o receptech, kuchařských trikách a zahradnických nápadech, které vám pomohou vytvořit skvělé jídlo a úspěšný záhradní projekt. Připojte se k nám a získávejte inspiraci každý den!