ಢಾಕಾ: ಬಾಂಗ್ಲಾದೇಶದ ಖ್ಯಾತ ನಟಿ ಮೇಲೆ ಅತ್ಯಾಚಾರ, ಕೊಲೆಗೆ ಯತ್ನಿಸಿದ್ದು, ನ್ಯಾಯಕ್ಕಾಗಿ ಪ್ರಧಾನಿಯವರಿಗೆ ನಟಿ ಮನವಿ ಮಾಡಿದ್ದಾರೆ.
ಪೋರಿ ಮೋನಿ ಅವರು ಪ್ರಧಾನಿ ಶೇಖ್ ಹಸೀನಾ ಅವರನ್ನು ಉದ್ದೇಶಿಸಿ ಫೇಸ್ಬುಕ್ ಪೋಸ್ಟ್ ಹಾಕಿದ್ದು, ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಪೋರಿಮೋನಿ ಎಂದೇ ಖ್ಯಾತರಾಗಿರುವ ನಟಿ ಶಮ್ಸುನ್ನಹರ್ ಸ್ಮ್ರಿಟಿ ಬಾಂಗ್ಲಾ ದೇಶದ ಪ್ರಖ್ಯಾತ ಸಿನಿಮಾ ತಾರೆಯರಲ್ಲಿ ಒಬ್ಬರಾಗಿದ್ದಾರೆ. 25 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಇತ್ತೀಚೆಗೆ ಫೋರ್ಬ್ಸ್ ಬಿಡುಗಡೆ ಮಾಡಿದ ಏಷ್ಯಾ-ಪೆಸಿಫಿಕ್ ಪ್ರಭಾವಿಶಾಲಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಪ್ರಧಾನಿ ಶೇಖ್ ಹಸೀನಾ ಅವರನ್ನು ಅಮ್ಮ ಉದ್ದೇಶಿಸಿ ಅಳಲು ತೋಡಿಕೊಂಡ ಅವರು, ನಾನು ಮಹಿಳೆ, ಹೀರೋಯಿನ್, ಈ ದೇಶದ ಪ್ರಜೆ, ಮುಖ್ಯವಾಗಿ ನಾನು ಮನುಷ್ಯಳು. ನನ್ನ ತಾಯಿ ತೀರಿ ಹೋದಾಗ ನನಗೆ ಎರಡೂವರೆ ವರ್ಷ. ಈಗ ಇಂತಹ ಘಟನೆ ನಡೆದಿದ್ದು, ನ್ಯಾಯ ಕೊಡಸಬೇಕು ಎಂದು ತಿಳಿಸಿದ್ದಾರೆ.
ಪೊಲೀಸರ ಮೊರೆ ಹೋದರೂ ಪ್ರಯೋಜನವಾಗಿಲ್ಲ. ಹಲವರಿಗೆ ನೆರವು ಕೇಳಿದರೂ ಸಹಾಯ ಮಾಡಿಲ್ಲ. ನನ್ನನ್ನು ದೈಹಿಕವಾಗಿ ನಿಂದಿಸಿದ್ದು, ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ್ದಾರೆ. ನನಗೆ ನ್ಯಾಯ ಬೇಕು ಎಂದು ಅವರು ಪ್ರಧಾನಿಯವರಿಗೆ ಬರೆದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.