![](https://kannadadunia.com/wp-content/uploads/2020/09/Prabhas.jpg)
ಹೈದರಾಬಾದ್: ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್ ಗೆ ಭರ್ಜರಿ ಗಿಫ್ಟ್ ನೀಡುವ ಮೂಲಕ ಗಮನ ಸೆಳೆದಿದ್ದ ಟಾಲಿವುಡ್ ರೆಬಲ್ ಸ್ಟಾರ್, ಬಾಹುಬಲಿ ಖ್ಯಾತಿಯ ಪ್ರಭಾಸ್, ಇದೀಗ ಇಡೀ ಅರಣ್ಯವೊಂದನ್ನೇ ದತ್ತು ಪಡೆಯುವ ಮೂಲಕ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು, ನಟ ಪ್ರಭಾಸ್ ಹೈದರಾಬಾದ್ ಬಳಿಯ 1650 ಎಕರೆ ಪ್ರದೇಶ ಕಾಜಿಪಲ್ಲಿ ಮೀಸಲು ಅರಣ್ಯವನ್ನು ದತ್ತು ಪಡೆದು ಅರಣ್ಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಪ್ರಭಾಸ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, ಈ ಕುರಿತ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ.
ಈ ಅರಣ್ಯದ ಅಭಿವೃದ್ಧಿಗಾಗಿ 2 ಕೋಟಿ ರೂ. ಹಣವನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ. ಜತೆಗೆ ಅರಣ್ಯ ಉದ್ಯಾನವನಕ್ಕಾಗಿ ಅಡಿಗಲ್ಲು ಕಾರ್ಯಕ್ರಮವನ್ನು ಕೂಡ ಪ್ರಭಾಸ್ ನೆರವೇರಿಸಿದ್ದಾರೆ.