
ದೊಡ್ಡವನ್ನು ಅನುಕರಣೆ ಮಾಡುವುದು ಮಕ್ಕಳಿಗೆ ಬಲು ಮೋಜಿನ ಹಾಗೂ ಕಲಿಕೆಯ ಸ್ವಾಭಾವಿಕ ಮಾರ್ಗವೂ ಹೌದು. ಇಂಥ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ಮರಳು ಮಾಡಿದೆ.
ತಾಯಿಯೊಬ್ಬರು ತಮ್ಮ ಮುಂಜಾನೆಯ ಕಲಿಕೆಯಲ್ಲಿ ನಿರತರಾಗಿದ್ದ ವೇಳೆ ಅವರ ಪುಟಾಣಿ ಮಗು ಬಂದು ಆಕೆಯನ್ನು ಅನುಕರಿಸುವ ಈ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
JEE Main 2021: ಇತಿಹಾಸ ಬರೆದ ದೆಹಲಿ ಯುವತಿ ಕಾವ್ಯಾ ಚೋಪ್ರಾ – 300ಕ್ಕೆ 300 ಅಂಕ ಪಡೆದು ಸಾಧನೆ
ತನ್ನ ಕಂದಮ್ಮನನ್ನು ತೊಡೆ ಮೇಲೆ ಕೂರಿಸಿಕೊಂಡು ಶಾಸ್ತ್ರೀಯ ರಾಗವೊಂದನ್ನು ಅಭ್ಯಾಸ ಮಾಡುತ್ತಿರುವ ಶಾಸ್ತ್ರೀಯ ಗಾಯಕಿ ಪ್ರಿಯಾಂಕಾ ಬಾರ್ವೆ ಹಾಗೂ ಯುವಾನ್ ಈ ವಿಡಿಯೋದಲ್ಲಿರುವ ಅಮ್ಮ-ಮಗ. ತಮ್ಮ ಅಮ್ಮ ಜೋರಾಗಿ ಹಾಡುವುದನ್ನು ನೋಡಿದ ಈ ಆರು ತಿಂಗಳ ಪುಟಾಣಿ ತನ್ನದೇ ಭಾಷೆಯಲ್ಲಿ ತಾನೂ ಹಾಡಲು ಯತ್ನಿಸಿ ಆಕೆಯನ್ನು ಪುಳಕಗೊಳಿಸಿದ್ದಾನೆ.