ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಆಡುತ್ತಿದ್ದ ಆಟಗಳನ್ನು ನೆನೆಯುವುದೇ ಒಂದು ಸ್ಮರಣೀಯ ಅನುಭವ. ಈ ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಜನರಿಗೆ ಮನೆಗಳಲ್ಲಿ ಕುಳಿತಿರಬೇಕಾದ ಕಾರಣ ತಂತಮ್ಮ ಬಾಲ್ಯದ ದಿನಗಳನ್ನು ನೆನೆದು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವುದು ಅಭ್ಯಾಸವಾಗಿದೆ.
ಬಾಲಿವುಡ್ ನಟ ಆಯುಶ್ಮಾನ್ ಹಾಗೂ ಅಪರ್ಶಕ್ತಿ ಖುರಾನ ಸಹೋದರರು ತಮ್ಮ ಬಾಲ್ಯದ ದಿನಗಳಲ್ಲಿ ಪರಸ್ಪರ ಚಪ್ಪಾಳೆ ಹೊಡೆದುಕೊಳ್ಳುತ್ತಿದ್ದ ರೀತಿಯನ್ನು ಮರುಸೃಷ್ಟಿಸಿ ಅದರ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ರೀತಿಯ ಆಟ ಏನಾದ್ರೂ ಒಲಿಂಪಿಕ್ಸ್ನಲ್ಲಿ ಇದ್ದಿದ್ದೇ ಆಗಿದ್ದಲ್ಲಿ ಈ ಹುಡುಗರಿಗೆ ಚಿನ್ನದ ಪದಕ ಪಕ್ಕಾ ಸಿಗುತ್ತಿತ್ತು” ಎಂದು ಇಬ್ಬರೂ ಅಪರ್ಶಕ್ತಿ ಎಂಬ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನೊಂದಿಗೆ ಬರೆದುಕೊಂಡಿದ್ದಾರೆ.
https://www.instagram.com/p/CCP_gHTp1_L/?utm_source=ig_embed