ಅಟ್ಲಾಂಟಾದ ಕೆಡಿ ಫ್ರೆಂಚ್ ಹೆಸರಿನ ಮಹಿಳೆಯೊಬ್ಬರು ಈ ಕ್ವಾರಂಟೈನ್ ಅವಧಿಗೊಂದು ಸಖತ್ ಥೀಮ್ ಹಾಡನ್ನು ಕ್ರಿಯೇಟ್ ಮಾಡಿದ್ದಾರೆ. ‘At the fridge again’ ಹೆಸರಿನ ಈ ಹಾಡಿನಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಸೇರಿಕೊಂಡ ಜನರು ಹೇಗೆ ತಮ್ಮ ದಿನಗಳನ್ನು ತಳ್ಳುತ್ತಿದ್ದಾರೆ ಎಂದು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.
ಏನಾದ್ರೂ ಮೇಯೋದಕ್ಕೆ ಬೇಕು ಅಂತ ಪದೇ ಪದೇ ಫ್ರಿಜ್ ಅನ್ನು ಶೋಧಿಸುವ ನಮ್ಮೆಲ್ಲರ ಖಯಾಲಿಯನ್ನೇ ಬಲೇ ಮಜವಾಗಿ ಪದಗಳಲ್ಲಿ ಕಟ್ಟಿಕೊಂಡು ಹಾಡಿದ್ದಾರೆ ಫ್ರೆಂಚ್.
“Y’all! Come and get ha! At least making this song kept me from the fridge for about an hour,” ಎಂದು ಕ್ಯಾಪ್ಷನ್ ಹಾಕಿರುವ ಈ ಹಾಡಿನಲ್ಲಿ ಕೊರೋನಾ ವೈರಸ್ ಕಾಲಘಟ್ಟದ ಇಡಿಯ ಮೂಡ್ ಅನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
https://www.facebook.com/khristie.french/videos/3472785792753525/?t=2