ನಟ ಸುಶಾಂತ್ ಸಿಂಗ್ ರಜಪೂತ್ ಅತ್ಯಂತ ಭಾವಜೀವಿ. ತನ್ನ 16ನೇ ವಯಸ್ಸಿನಲ್ಲಿ ಅಂದರೆ, 2002 ರಲ್ಲಿ ತಾಯಿ ಕಳೆದುಕೊಂಡಿದ್ದ ಸುಶಿ, 2016 ರಲ್ಲಿ ಎರಡು ಕವಿತೆ ರಚಿಸಿದ್ದ. ನೃತ್ಯ ಪ್ರದರ್ಶಿಸಿದ್ದ. ಇನ್ ಸ್ಟಾ ಗ್ರಾಮ್ ನ ಕೊನೆಯ ಪೋಸ್ಟ್ ಕೂಡ ತಾಯಿಗೆ ಸಂಬಂಧಿಸಿದ್ದೇ ಆಗಿತ್ತು.
ಮಾತೆಗೆ ನನ್ನ ಪ್ರಣಾಮ ಎಂಬ ಕವನ ರಚಿಸಿದ್ದ ಆತ, “ಎಷ್ಟು ಸಾಧ್ಯವೋ ಅಷ್ಟು ದೀರ್ಘಕಾಲ ನೀನಿದ್ದೆ, ನಾನೂ ಇದ್ದೆ. ನಾನೀಗ ನಿನ್ನ ನೆನಪಿನಲ್ಲಷ್ಟೇ ಜೀವಂತವಾಗಿ ಇರಬಲ್ಲೆನು. ಕೇವಲ ಒಂದು ನೆರಳಾಗಿ, ಕಂಪನವಾಗಿ ಬರಬಲ್ಲೆನು” ಎಂದು ಕವಿತ್ವ ಮೆರೆದಿದ್ದ.
ಇನ್ನೊಂದು ಕವನದಲ್ಲಿ “ನೆನಪಿದೆಯೇ ನಿನಗೆ ? ನನ್ನೊಂದಿಗೆ ಸದಾ ಇರುತ್ತೇನೆಂದು ವಚನ ಕೊಟ್ಟಿದ್ದೆ. ನಾನೂ ಅದೇ ಮಾತನ್ನ ನಿನಗೆ ನೀಡಿದ್ದೆ” ಎನ್ನುತ್ತಾ ಭಾವನೆಗಳನ್ನು ಹೊರಹಾಕಿದ್ದ. ಆದರೀಗ ಆತನೂ ಇಲ್ಲ. ಈ ಕವನಗಳು, ತಾಯಿಗಾಗಿ ಮಾಡಿದ ನೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸುಳಿದಾಡುತ್ತಿದ್ದು, ನೆಟ್ಟಿಗರು ಕಣ್ಣೀರಾಗಿದ್ದಾರೆ.
https://www.instagram.com/p/CA-S3cIDWOx/?utm_source=ig_embed