alex Certify ಕಾಜೋಲ್ ಅಳುವ ಸೀನ್ ರೀಮಿಕ್ಸ್ ಕಮಾಲ್, ನೆಟ್ಟಿಗರು ಖುಷ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಜೋಲ್ ಅಳುವ ಸೀನ್ ರೀಮಿಕ್ಸ್ ಕಮಾಲ್, ನೆಟ್ಟಿಗರು ಖುಷ್

ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ “ಕಭಿ ಖುಷಿ ಕಭಿ ಗಮ್” ಎರಡು ದಶಕಗಳ ನಂತರವೂ ಜನರ ಮನದಲ್ಲಿದೆ. ಅದೇ ಚಿತ್ರದ ಹಾಡಿನ ಸನ್ನಿವೇಶ ಇಟ್ಟುಕೊಂಡು ರಚಿಸಿದ ರೀಮಿಕ್ಸ್ ಸಂಗೀತವೊಂದು ಜಾಲತಾಣಗಳಲ್ಲಿ ಪ್ರಸಿದ್ಧವಾಗಿದ್ದು, ಫುಲ್ ವೈರಲ್ ಆಗಿದೆ.

ಸಂಗೀತ ನಿರ್ಮಾಪಕ ಹಾಗೂ ಸಂಯೋಜಕ ಮಯೂರ ಜುಮಾಜಿ ಅವರು ಸಿನೆಮಾ ಸನ್ನಿವೇಶವನ್ನು ವಿಭಿನ್ನವಾಗಿ ಬಳಸಿಕೊಂಡಿದ್ದು, ಫೇಸ್ ಬುಕ್ ಹಾಗೂ ಇನ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ, ಕಾಜೋಲ್, ನಿರ್ದೇಶಕ ಕರಣ್ ಜೋಹರ್ ಸಹಿತ ಹಲವರ ಪ್ರೀತಿಪೂರ್ವಕ ಕ್ಷಮೆಯನ್ನೂ ಕೇಳಿ ತಮಾಷೆಯ ವಿಡಿಯೋ ಮಿಕ್ಸಪ್ ಮಾಡಿದ್ದಾರೆ.

2001 ರಲ್ಲಿ ನಿರ್ಮಾಣವಾದ ಕರಣ್ ಜೋಹರ್ ನಿರ್ದೇಶನದ ಚಿತ್ರದಲ್ಲಿ ನಟಿ ಕಾಜೋಲ್ ಅಳುವ ಸನ್ನಿವೇಶವಿದೆ. ಶಾರುಖ್ ಖಾನ್ ಕೂಡ ಸೀನ್ ನಲ್ಲಿದ್ದಾರೆ. ಮಯೂರ್ ಅದೇ ಸೀನ್ ಬಳಸಿಕೊಂಡಿದ್ದಾರೆ. ಮ್ಯೂಸಿಕ್ ಕಂಪೋಸ್ ಮಾಡುವ ಸಂದರ್ಭದಲ್ಲಿ ಕಾಜೋಲ್ ಅಳು ಹಾಗೂ ಮ್ಯೂಸಿಕ್ ಅನ್ನು ವಿಭಿನ್ನವಾಗಿ ಕೇಳುವಂತೆ ರಿಕಂಪೋಸ್ ಮಾಡಿ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ.

https://www.instagram.com/p/CJ0BbZ5pocW/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...