alex Certify ಆಮ್ಲಜನಕ ಮಟ್ಟ ಏರಿಕೆ ಮಾಡಿಕೊಂಡಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಬಿಗ್​ ಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲಜನಕ ಮಟ್ಟ ಏರಿಕೆ ಮಾಡಿಕೊಂಡಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಬಿಗ್​ ಬಿ

ಬಾಲಿವುಡ್​ನ ಹೆಸರಾಂತ ನಟ ಅಮಿತಾಭ್​ ಬಚ್ಚನ್​ ಕೌನ್​ ಬನೇಗಾ ಕರೋಡ್​ಪತಿ ಶೋ ನಡೆಸಿಕೊಡ್ತಾ ಇರೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಶೋನಲ್ಲಿ ಅಮಿತಾಬ್​ ಬಚ್ಚನ್​ ತಮ್ಮ ಕರೊನಾದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಹಾಗೂ ನಮ್ಮ ಆಮ್ಲಜನಕ ಮಟ್ಟವನ್ನ ಹೇಗೆ ಸುಧಾರಿಸಿಕೊಳ್ಳಬಹುದು ಅನ್ನೋದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಶೋಗೆ ಬಂದಿದ್ದ ಅಪರ್ಣಾ ಎಂಬವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಬಿಗ್​ ಬಿ, ಕರೊನಾ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ದಿನಗಳನ್ನ ನೆನೆಸಿಕೊಂಡರು. ಜುಲೈ ತಿಂಗಳಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಆಸ್ಪತ್ರೆಯಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಆಮ್ಲಜನಕ ಪೂರೈಕೆ ಪ್ರಮಾಣವನ್ನ ಪರೀಕ್ಷಿಸಲಾಗುತ್ತಿತ್ತು ಅಂತಾ ಹೇಳಿದ್ದಾರೆ.

ಕರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಅಮಿತಾಬ್​ರ ಆಮ್ಲಜನಕ ಮಟ್ಟ 92-93 ಇತ್ತು. ಆದರೆ ವೈದ್ಯರು ಅದು 98 ಇರಬೇಕು ಅಂತಾ ಹೇಳಿದ್ದರು . ಹೀಗಾಗಿ ನಾನು ಆಸ್ಪತ್ರೆ ಸಿಬ್ಬಂದಿ ಆಕ್ಸಿಮೀಟರ್​ ತೆಗೆದುಕೊಂಡು ಬರ್ತಿದ್ದಂತೆ ನನ್ನ ಉಸಿರನ್ನ ಒಳಕ್ಕೆ ಎಳೆದುಕೊಳ್ತಿದೆ. ಆಗ ಒಮ್ಮಿಂದೊಮ್ಮೆಲೆ ಆಮ್ಲಜನಕ ಪ್ರಮಾಣ ಏರಿಕೆಯಾಗುತ್ತಿತ್ತು ಎಂಬ ರಹಸ್ಯವನ್ನ ಬಹಿರಂಗಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...