
ಕಿರುತೆರೆ ನಟ ಅಭಿಷೇಕ್ ಕಪೂರ್ ಕುಂಡಲಿ ಭಾಗ್ಯ ಧಾರವಾಹಿ ಮೂಲಕ ಚಿರಪರಿಚಿತರಾದಂತಹ ನಟ. ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ರಿಶ್ತೇ ಎಂಬ ವೆಬ್ಸೀರಿಸ್ನಲ್ಲೂ ನಟಿಸಿದ್ದಾರೆ. ಇದೆಲ್ಲದರ ಜೊತೆಗೆ ಅಭಿಷೇಕ್ ಕಪೂರ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಆತ್ಮೀಯ ಸ್ನೇಹಿತ ಕೂಡ ಹೌದು.
ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ ದಂಪತಿ ಜೀವನದಲ್ಲಿ ಸದ್ಯದಲ್ಲೇ ಹೊಸ ಜೀವವೊಂದರ ಪ್ರವೇಶವಾಗಲಿದೆ ಎಂಬ ವಿಚಾರವಾಗಿ ಮಾತನಾಡಿದ ಅಭಿಷೇಕ್, ಕೊಹ್ಲಿ ಬಾಳಲ್ಲಿ ಅನುಷ್ಕಾ ಶರ್ಮಾ ವರವಾಗಿ ಆಗಮಿಸಿದ್ದಾರೆ ಅಂತಾ ಹೇಳಿದ್ದಾರೆ.
ನಾನು ವಿರಾಟ್ ಕೊಹ್ಲಿ ಜೊತೆಯಲ್ಲೇ ಬೆಳೆದವನು. ಹೀಗಾಗಿ ಅವನು ಹಿಂದೆ ಹೇಗಿದ್ದ. ಈಗ ಹೇಗಾಗಿದ್ದಾನೆ ಎಂಬ ವ್ಯತ್ಯಾಸವನ್ನ ಬಹುಬೇಗ ಅರಿತುಕೊಳ್ಳಬಲ್ಲೆ. ಅನುಷ್ಕಾ ಶರ್ಮಾ ಆತನ ಬಾಳಲ್ಲಿ ಬಂದ ಬಳಿಕ ಅವನು ಜೀವನದಲ್ಲಿ ಇನ್ನಷ್ಟು ಖುಷಿಯಾಗಿದ್ದಾನೆ. ಅಲ್ಲದೇ ಕೊಹ್ಲಿ ಒಬ್ಬ ಉತ್ತಮ ತಂದೆಯಾಗ್ತಾನೆ ಅನ್ನೋ ವಿಶ್ವಾಸ ನನಗಿದೆ ಅಂತಾ ಹೇಳಿದ್ದಾರೆ.