ಬಾಲಿವುಡ್ ಉದಯೋನ್ಮುಖ ಕಲಾವಿದನನ್ನು ಕಳೆದುಕೊಂಡಿದೆ. ಅಕ್ಷತ್ ಉತ್ಕರ್ಶ್ ಮೃತದೇಹ ಮುಂಬೈನಲ್ಲಿ ಸಿಕ್ಕಿದೆ. ಅಕ್ಷತ್ ಮೂಲತಃ ಬಿಹಾರದ ಮುಜಫರ್ಪುರದವರು. ಬಾಲಿವುಡ್ ನಲ್ಲಿ ಕೆಲಸ ಮಾಡ್ತಿದ್ದ ಅಕ್ಷಯ್ ಸಾವು ಕುಟುಂಬಸ್ಥರಲ್ಲಿ ಆಘಾತಕ್ಕೆ ಕಾರಣವಾಗಿದೆ.
ಭಾನುವಾರ ರಾತ್ರಿ 9 ಗಂಟೆಗೆ ಅಕ್ಷತ್ ತಂದೆ ಜೊತೆ ಫೋನ್ ನಲ್ಲಿ ಮಾತನಾಡಿದ್ದರಂತೆ. ನಂತ್ರ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಸಾವಿನ ಸುದ್ದಿ ನಮಗೆ ಬಂದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಮುಂಬೈ ಪೊಲೀಸರ ವಿರುದ್ಧವೂ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮುಂಬೈ ಪೊಲೀಸರು ಯಾವುದೇ ಎಫ್ಐಆರ್ ದಾಖಲಿಸಿಲ್ಲವೆಂದು ಆರೋಪ ಆಡಿದ್ದಾರೆ.
ಅಕ್ಷತ್ ಸಹಜವಾಗಿ ಸಾವನ್ನಪ್ಪಿಲ್ಲ. ಅವರನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಅಕ್ಷತ್ ಮೃತದೇಹವನ್ನು ಮುಜಫರ್ಪುರಕ್ಕೆ ತೆಗೆದುಕೊಂಡು ಹೋಗಲಾಗ್ತಿದೆ. ಕೆಲವೇ ಕ್ಷಣಗಳ ಹಿಂದೆ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸುಶಾಂತ್ ಸಾವಿನ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿರುವಾಗ್ಲೇ ಅಕ್ಷತ್ ಸಾವು ಕೆಲ ಅನುಮಾನಗಳಿಗೆ ಕಾರಣವಾಗಿದೆ.