alex Certify ನನ್ನ ಜೀವನದ ಪ್ರೀತಿಗೆ…..ಪತ್ನಿಗಾಗಿ ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ನಟ ಅನಿಲ್​ ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಜೀವನದ ಪ್ರೀತಿಗೆ…..ಪತ್ನಿಗಾಗಿ ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ನಟ ಅನಿಲ್​ ಕಪೂರ್​

ಬಾಲಿವುಡ್​ನ ಎವರ್​ಗ್ರೀನ್​ ಹಾಗೂ ಗುಡ್​​ ಲುಕ್ಕಿಂಗ್​ ನಟ ಅನಿಲ್​ ಕಪೂರ್​​ ತಮ್ಮ ಅಭಿಮಾನಿಗಳನ್ನ ಗಮನ ಸೆಳೆಯೋಕೆ ಎನಾದರೊಂದು ಮಾಡುತ್ತಲೇ ಇರ್ತಾರೆ. ಸಿನಿಮಾ, ಹಾಡು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕವಾದ್ರೂ ಅಭಿಮಾನಿಗಳಿಗೆ ಒಂದಿಲ್ಲೊಂದು ರಸದೌತಣವನ್ನ ಅನಿಲ್ ಬಡಿಸ್ತಾನೇ ಇರ್ತಾರೆ.

ಇಂದು ಅನಿಲ್​ ಕಪೂರ್​ ಪತ್ನಿ ಸುನೀತಾ​ ಕಪೂರ್​ರ ಜನ್ಮದಿನವಾಗಿದ್ದು ಈ ವಿಶೇಷ ದಿನದ ಪ್ರಯುಕ್ತ ಅನಿಲ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಪೆಷಲ್​ ಪೋಸ್ಟ್​ನ್ನು ಶೇರ್​ ಮಾಡಿದ್ದಾರೆ. ಪತ್ನಿ ಹಾಗೂ ಮಗಳೊಂದಿಗಿನ ಫೋಟೊವನ್ನ ಶೇರ್​ ಮಾಡಿರುವ ನಟ ಅನಿಲ್​ ಕಪೂರ್​ ನನ್ನ ಖುಷಿಗೆ ನೀನೇ ಕಾರಣ ಎಂದು ಪತ್ನಿಯನ್ನ ಹಾಡಿ ಹೊಗಳಿದ್ದಾರೆ.

ನನ್ನ ಜೀವನದ ಪ್ರೀತಿಗೆ, ರೈಲಿನ ಮೂರನೇ ದರ್ಜೆ ಬೋಗಿ, ಲೋಕಲ್​ ಬಸ್, ಆಟೋ, ಲೋಕಲ್​ ಟ್ಯಾಕ್ಸಿಯ ಮೇಲೆ ಪ್ರಯಾಣ ಮಾಡೋದ್ರಿಂದ ಹಿಡಿದು ಆರ್ಥಿಕತೆ ಸುಧಾರಣೆಯಾಗೋದ್ರವರೆಗೆ, ಕರೈಕಂಡಿಯಂತಹ ಹಳ್ಳಿಯ ಪುಟ್ಟ ಹೋಟೇಲ್​ನಿಂದ ಹಿಡಿದು ಲಡಾಖ್​​ನಲ್ಲಿ ವಾಸ್ತವ್ಯ ಹೂಡುವವರೆಗೆ ಎಲ್ಲವನ್ನ ನಾವು ಮುಖದ ಮೇಲೆ ಸಂತಸವನ್ನ ಇಟ್ಟುಕೊಂಡು ಹಾಗೂ ಹೃದಯದಲ್ಲಿ ಪ್ರೀತಿಯನ್ನ ಇಟ್ಟುಕೊಂಡು ಮಾಡಿದ್ದೇವೆ.

ನಿನ್ನನ್ನ ಪ್ರೀತಿ ಮಾಡೋಕೆ ಇರುವ ಲಕ್ಷಕ್ಕೂ ಹೆಚ್ಚು ಕಾರಣಗಳಲ್ಲಿ ಇವೆಲ್ಲ ಸೇರಿವೆ. ನನ್ನ ಸಂತೋಷಗಳಿಗೆ ನೀನೇ ಕಾರಣ. ನಿನ್ನಿಂದಾಗಿ ನನ್ನ ಜೀವನದ ಪ್ರಯಾಣ ತುಂಬಾ ಖುಷಿಯಾಗಿದೆ. ನಿನ್ನಂತ ಸಂಗಾತಿಯನ್ನ ಪಡೆಯಲು ನಾನು ಪುಣ್ಯ ಮಾಡಿದ್ದೆ. ಹ್ಯಾಪಿ ಬರ್ತಡೇ ಎಂದು ಬರೆದಿದ್ದಾರೆ. ಈ ಪೋಸ್ಟ್ ನೋಡಿದ ಅನಿಲ್​ ಕಪೂರ್​ ಅಭಿಮಾನಿಗಳು ಲೈಕ್​ ಹಾಗೂ ಕಮೆಂಟ್​ಗಳ ಸುರಿಮಳೆಯನ್ನ ಹರಿಸುತ್ತಿದ್ದಾರೆ.

https://www.instagram.com/p/CMz8SdCHLuD/?utm_source=ig_web_copy_link

https://www.instagram.com/p/CM0RlAfFQ_o/?utm_source=ig_embed

https://www.instagram.com/p/CHfPvw-BCRJ/?utm_source=ig_embed

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...