
64 ವರ್ಷದ ನಟ ಅನಿಲ್ ಕಪೂರ್ ದಿವಂಗತ ನಟ ದಿಲೀಪ್ ಕುಮಾರ್ ಗೆ ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ಅಂತಿಮ ನಮನ ಸಲ್ಲಿಸಿದ್ದಾರೆ. 1980 ದಶಕದಲ್ಲಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದ ಅನಿಲ್ ಕಪೂರ್ಗೆ ಖ್ಯಾತ ನಟ ದಿಲೀಪ್ ಕುಮಾರ್ ಜೊತೆ ನಟಿಸುವ ಸದಾವಕಾಶ ಒಲಿದು ಬಂದಿತ್ತು. ಮೂರು ಸಿನಿಮಾಗಳಲ್ಲಿ ಅನಿಲ್ ಕಪೂರ್, ದಿಲೀಪ್ ಕುಮಾರ್ ಜೊತೆ ನಟಿಸಿದ್ದಾರೆ.
ಶೂಟಿಂಗ್ ನಡುವೆ ಕ್ಲಿಕ್ಕಿಸಲಾದ ಕೆಲ ಅಪರೂಪದ ಫೋಟೋಗಳನ್ನ ಶೇರ್ ಮಾಡಿರುವ ನಟ ಅನಿಲ್ ಕಪೂರ್ : ನಮ್ಮ ಅತ್ಯಮೂಲ್ಯ ನಕ್ಷತ್ರವೊಂದು ಕಳೆದುಕೊಂಡ ಈ ಜಗತ್ತು ಇಂದು ಮಂದವಾಗಿದೆ. ದಿಲೀಪ್ ನಮ್ಮ ತಂದೆಗೆ ಅತ್ಯಂತ ಆತ್ಮೀಯರಾಗಿದ್ರು ಹಾಗೂ ಇವರ ಜೊತೆ ಮೂರು ಸಿನಿಮಾಗಳನ್ನ ನಟಿಸಿದ ಬಗ್ಗೆ ನನಗೆ ಹೆಮ್ಮೆ ಇದೆ. ದಿಲೀಪ್ ಎಂದಿಗೂ ನಮ್ಮ ಚಿತ್ರರಂಗ ಕಂಡ ಶ್ರೇಷ್ಟ ನಟರಾಗಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ದಿಲೀಪ್ ಸಾಹೇಬ್. ನೀವು ನಮ್ಮ ಮನಸ್ಸು ಹಾಗೂ ಹೃದಯದಲ್ಲಿ ಸದಾ ನೆಲೆಸಿರುತ್ತೀರಿ ಎಂದು ಬರೆದಿದ್ದಾರೆ.
