alex Certify ಬಹುಭಾಷಾ ನಟಿ ಶಿಲ್ಪಾಶೆಟ್ಟಿಗೆ ಬಿಗ್ ಶಾಕ್: ಚೀಟಿಂಗ್ ಕೇಸ್ ನಲ್ಲಿ ಕೋರ್ಟ್ ಸಮನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಭಾಷಾ ನಟಿ ಶಿಲ್ಪಾಶೆಟ್ಟಿಗೆ ಬಿಗ್ ಶಾಕ್: ಚೀಟಿಂಗ್ ಕೇಸ್ ನಲ್ಲಿ ಕೋರ್ಟ್ ಸಮನ್ಸ್

ಮುಂಬೈ: ಬಹುಭಾಷಾ ನಟಿ ಶಿಲ್ಪಾ ಶೆಟ್ಟಿಗೆ ಅಂಧೇರಿ ಕೋರ್ಟ್ ನಿಂದ ನೊಟೀಸ್ ನೀಡಲಾಗಿದೆ. 21 ಲಕ್ಷ ರುಪಾಯಿ ಸಾಲ ಪಡೆದು ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಫೆಬ್ರವರಿ 28ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

ಬಾಲಿವುಡ್ ನಟಿಯರಾದ ಶಿಲ್ಪಾಶೆಟ್ಟಿ ಮತ್ತು ಸಹೋದರಿ ಶಮಿತಾ ಶೆಟ್ಟಿ ಹಾಗೂ ಶಿಲ್ಪಾಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿಯವರಿಗೆ ನೋಟಿಸ್ ನೀಡಲಾಗಿದೆ. ಸಾಲ ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಉದ್ಯಮಿಯೊಬ್ಬರ ದೂರು ಆಧರಿಸಿ ನೋಟಿಸ್ ನೀಡಲಾಗಿದೆ.

ಇತ್ತೀಚೆಗಷ್ಟೇ ಶಿಲ್ಪಾ ಶೆಟ್ಟಿ ಹೆಸರಿಗೆ 35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅವರ ಹೆಸರಿಗೆ ಪತಿ ರಾಜ್ ಕುಂದ್ರಾ ವರ್ಗಾಯಿಸಿದ್ದರು.

ಪರ್ಹಾದ್ ಅಮ್ರಾ ಎಂಬಾತನಿಗೆ 21 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಅಂಧೇರಿಯಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮೂವರಿಗೆ ಸಮನ್ಸ್ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...