
ಸೆಲೆಬ್ರಿಟಿಗಳು, ಅದರಲ್ಲೂ ಈ ನಟಿಮಣಿಯರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದ್ರೂ ಅದಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಪಕ್ಕಾ.
ಬಾಲಿವುಡ್ ನಟಿ ಅನನ್ಯಾ ಪಾಂಡೆ ತಮ್ಮ ಬಾಲ್ಯದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಸಹೋದರಿ ರಾಯ್ಸಾ ಜೊತೆಗೆ ತೆಗೆಸಿಕೊಂಡ ಬಾಲ್ಯದ ಚಿತ್ರವೊಂದನ್ನು ಅನನ್ಯಾ ಹಾಕಿದ್ದಾರೆ. ಇದೇ ಪೋಸ್ಟ್‌ನಲ್ಲಿ ತಾವಿಬ್ಬರೂ ದೊಡ್ಡವರಾದ ಮೇಲೆ ತೆಗೆಸಿಕೊಂಡ ಚಿತ್ರವೊಂದನ್ನೂ ಸಹ ಲಗತ್ತಿಸಿದ್ದಾರೆ ಅನನ್ಯಾ.
ನಟೀಮಣಿಯರ ಈ ಪೋಸ್ಟ್‌ಗಳಿಗೆ ಅವರ ಅಮ್ಮಂದಿರು ಕಾಮೆಂಟ್ ಸೆಕ್ಷನ್‌ನಲ್ಲಿ ಮಾತನಾಡಿಕೊಂಡಿರುವ ಸಂಭಾಷಣೆಯನ್ನೂ ಸಹ ನೆಟ್ಟಿಗರು ಬಹಳ ಆಸಕ್ತಿಯಿಂದ ನೋಡುತ್ತಿದ್ದು, ಆ ಕಾಮೆಂಟುಗಳಿಗೂ ಲೈಕ್‌ಗಳು ಬಂದಿವೆ.
ನಟ ಚಂಕಿ ಪಾಂಡೆ ಹಾಗೂ ಭಾವನಾ ಮಗಳಾದ ಅನನ್ಯ ಪಾಂಡೆ ಇತ್ತೀಚೆಗೆ ತನ್ನ 22ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
