ನಟಿ ಅನನ್ಯ ಪಾಂಡೆ ಹಾಗೂ ಸುಹಾನಾ ಖಾನ್ ಬಾಲ್ಯದ ಸ್ನೇಹಿತರು. ಇಂದಿಗೂ ಸಹ ಅವರಿಬ್ಬರು ತಮ್ಮ ಬಾಂಧವ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಗೆಳೆಯರು ಆಗಿಂದಾಗೆ ಒಟ್ಟಿಗೆ ಸುತ್ತಾಡುವುದು ನಡೆದೇ ಇದೆ.
ಇದೇ ವೇಳೆ ಅನನ್ಯಾ ಪಾಂಡೆ ಅವರು ಸುಹಾನ ಸಹೋದರ ಅಬ್ರಾಮ್ ಖಾನ್ ಜತೆಗಿನ ಒಡನಾಟವನ್ನು ಸಂದರ್ಶನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. ತನ್ನ ಮೊದಲ ಬಾಲಿವುಡ್ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಟ್ರೈಲರ್ ವೀಕ್ಷಿಸಲು ಅಬ್ರಾಮ್ ಬಂದಿದ್ದನ್ನು ಅನನ್ಯಾ ನೆನಪಿಸಿಕೊಂಡಿದ್ದಾರೆ.
ಅಬ್ರಾಮ್ ಸಣ್ಣವನಿದ್ದಾಗ ತಮ್ಮ ಮನೆಗೆ ಬರುತ್ತಿದ್ದ, ಸ್ಕ್ರೀನ್ ಮೇಲೆ ತಾನು ಬರುತ್ತಿದ್ದ ಚಿತ್ರದ ಭಾಗವನ್ನು ರೀಪ್ಲೇ ಮಾಡುತ್ತಿದ್ದ ಮತ್ತು ಆತ ನನ್ನ ಫೇವರಿಟ್ ಮಗುವಾಗಿದ್ದ ಎಂದು ಅನನ್ಯಾ ಹೇಳಿಕೊಂಡಿದ್ದಾರೆ.