alex Certify ಮಗು ಜನನದ ಬಳಿಕ ನಿಶ್ಚಿತ ವರನೊಂದಿಗೆ ಬ್ರೇಕಪ್​ ಮಾಡಿಕೊಂಡ್ರಾ ಆ್ಯಮಿ ಜಾಕ್ಸನ್​…!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಜನನದ ಬಳಿಕ ನಿಶ್ಚಿತ ವರನೊಂದಿಗೆ ಬ್ರೇಕಪ್​ ಮಾಡಿಕೊಂಡ್ರಾ ಆ್ಯಮಿ ಜಾಕ್ಸನ್​…!?

ಬ್ರಿಟಿಷ್​ ನಟಿ ಆ್ಯಮಿ ಜಾಕ್ಸನ್​​​ ತಮ್ಮ ನಿಶ್ಚಿತ ವರನ ಜೊತೆ ಬ್ರೇಕಪ್​ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಬಿ ಟೌನ್​ನಲ್ಲಿ ಹರಿದಾಡುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ನಿಶ್ಚಿತ ವರ ಜಾರ್ಜ್​ ಪನಾಯೋಟೌ ಹಾಗೂ ಮಗುವಿನ ಜನನದ ಬಗ್ಗೆ ಘೋಷಣೆ ಮಾಡಿದ್ದ ಎಲ್ಲಾ ಪೋಸ್ಟ್​ಗಳನ್ನೂ ಆ್ಯಮಿ ಡಿಲೀಟ್​ ಮಾಡಿರೋದು ಅನುಮಾನಕ್ಕೆ ಕಾರಣವಾಗಿದೆ.

ಮೇ 2019ರಲ್ಲಿ ಜಾಂಬಿಯಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆ್ಯಮಿ ಜಾಕ್ಸನ್​ ಹಾಗೂ ಜಾರ್ಜ್ ಪನಾಯೋಟೌ ಜೋಡಿ ಇದೇ ವರ್ಷ ತಮ್ಮ ಪುತ್ರ ಆಂಡ್ರೆಸ್​ನನ್ನ ಬರ ಮಾಡಿಕೊಂಡಿದ್ದರು. ಇದೀಗ ನಿಶ್ಚಿತ ವರನಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನೂ ನಟಿ ಡಿಲೀಟ್​ ಮಾಡಿದ್ದಾರೆ.

ನಟಿ ಆ್ಯಮಿ ಜಾಕ್ಸನ್​ ಸ್ಯಾಂಡಲ್​ವುಡ್​​ನ ʼವಿಲನ್ʼ​ ಸಿನಿಮಾದಲ್ಲಿ ಸುದೀಪ್​ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...