ಬೆಂಗಳೂರು: ನಟಿ ಅಮೂಲ್ಯ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್.ಆರ್. ನಗರ ಕ್ಷೇತ್ರದ ಬಿಇಟಿ ಕಾನ್ವೆಂಟ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಅವರು ಮತದಾನ ಮಾಡಿದ್ದಾರೆ.
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವುದು ಮತದಾರರ ಹಕ್ಕು. ಜವಾಬ್ದಾರಿಯಾಗಿದೆ. ಮತದಾರರು ಸುರಕ್ಷತೆ ಕ್ರಮಗಳೊಂದಿಗೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ಯುವಕರು ಸೇರಿದಂತೆ ಎಲ್ಲಾ ಮತದಾರರು ವೋಟ್ ಮಾಡಿ ಎಂದು ಅವರು ತಿಳಿಸಿದ್ದಾರೆ.
ಜಿದ್ದಾಜಿದ್ದಿನ ಕಣವಾಗಿರುವ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಅಮೂಲ್ಯ ಇವತ್ತು ಬೆಳಿಗ್ಗೆಯೇ ಮತದಾನ ಮಾಡಿದ್ದಾರೆ.