ಇತ್ತೀಚಿಗೆ ತಾನೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ‘ಗುಲಾಬೋ ಸಿತಾಬೋ’ದಲ್ಲಿರುವ ಅಮಿತಾಬ್ ಬಚ್ಚನ್ ಲುಕ್ ನಲ್ಲಿ ದೆಹಲಿ ಗಲ್ಲಿಯಲ್ಲಿ ವೃದ್ಧನೊಬ್ಬ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.
ಹೌದು, ಹಳೇ ದೆಹಲಿಯ ಗಲ್ಲಿಯಲ್ಲಿ ಕಾಣಿಸಿಕೊಂಡಿರುವ ವೃದ್ಧ, ಗುಲಾಬೋ ಸಿತಾಬೋದಲ್ಲಿ ಮಿರ್ಜಾ ಪಾತ್ರಧಾರಿಯಾಗಿ ಕಾಣಸಿಕೊಂಡಿರುವ ಬಚ್ಚನ್ ಅವರ ರೀತಿಯಲ್ಲೇ ಕಾಣುತ್ತಿದ್ದಾರೆ. ಈ ವೃದ್ಧನ ಫೋಟೋವನ್ನು ಮಯಾಂಕ್ ಅಸ್ಟೀನ್ ಕ್ಲಿಕ್ಕಿಸಿದ್ದಾರೆ. ಇದೀಗ ಫೋಟೋ ವೈರಲ್ ಆಗಿದೆ.
ಎರಡು ಫೋಟೋವನ್ನು ಕೊಲ್ಯಾಜ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅನೇಕರು ದಂಗಾಗಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
https://www.instagram.com/p/CAhohzmH1Tm/?utm_source=ig_embed