ಮುಂಬೈ: 12 ವರ್ಷಗಳ ಯಶಸ್ವಿ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.
ಹೌದು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಿ ಅಮಿತಾಬ್ ಬಚ್ಚನ್ 13ನೇ ಸೀಸನ್ ನ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮ ನಡೆಸಿಕೊಡಲು ತಯಾರಾಗಿದ್ದಾರೆ. ಆಗಸ್ಟ್ ನಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಪಂತ್ – ಸಾಹಾ ಆಡದೇ ಇದ್ದಲ್ಲಿ ವಿಕೆಟ್ ಕೀಪಿಂಗ್ ಮಾಡಲು ನಾನ್ ರೆಡಿ ಎಂದಿದ್ದಾರೆ ಈ ಆಟಗಾರ
ವರದಿಗಳ ಪ್ರಕಾರ ಆಗಸ್ಟ್ 23ರಂದು ಈ ಕಾರ್ಯಕ್ರಮದ ಪ್ರಥಮ ಪ್ರದರ್ಶನ ಕಾಣಲಿದೆ ಎನ್ನಲಾಗಿದೆ. ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ ಅಧ್ಯಾಯ-4ರ ಫೈನಲ್ ಹಂತ ಆಗಸ್ಟ್ 29ರಂದು ನಡೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಪ್ರಸ್ತುತ ಕೊರೊನಾ ವೈರಸ್ ಪರಿಣಾಮದಿಂದಾಗಿ ಪ್ರದರ್ಶನ ಸ್ವರೂಪದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿರಬಹುದು. ಆಯ್ಕೆ ಮತ್ತು ಸ್ಕ್ರೀನಿಂಗ್ ಪ್ರಕ್ರಿಯೆಯು ಡಿಜಿಟಲ್ ರೂಪದಲ್ಲಿ ನಡೆಯಲಿದೆ ಎನ್ನಲಾಗಿದೆ.
ಅಮಿತಾಬ್ ಬಚ್ಚನ್ ನಡೆಸಿಕೊಡುವ ಈ ಕಾರ್ಯಕ್ರಮ ವೀಕ್ಷಿಸಲು ಪ್ರೇಕ್ಷಕರು ತುದಿಗಾಲಿನಲ್ಲಿ ಕಾದು ಕೂತಿದ್ದಾರೆ. ಈ ಕಾರ್ಯಕ್ರಮದ ಮೊದಲ ಸೀಸನ್ 2000ನೇ ಇಸವಿಯಲ್ಲಿ ಪ್ರಾರಂಭವಾಯಿತು. ಕಳೆದ ವರ್ಷ 12ನೇ ಸೀಸನ್ ಚಿತ್ರೀಕರಣದ ವೇಳೆ ಅಮಿತಾಬ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೆ ಕೋವಿಡ್ ಸೋಂಕು ತಗುಲಿತ್ತು. ಅದಾಗ್ಯೂ ಕೊರೋನಾದಿಂದ ಚೇತರಿಸಿಕೊಂಡ ತಕ್ಷಣ ಅವರು ಸಂಪೂರ್ಣ ಮುಂಜಾಗ್ರತಾ ಕ್ರಮದೊಂದಿಗೆ ಮತ್ತೆ ಕಾರ್ಯಕ್ರಮ ನಡೆಸಿಕೊಡಲು ಹಾಜರಾಗಿದ್ದರು.