ಮುಂಬೈ: ಕೊರೊನಾದಿಂದ ಗುಣವಾಗಿ, ಕ್ವಾರಂಟೈನ್ ಮುಗಿಸಿ ಬಂದ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಶೂಟಿಂಗ್ ಗೆ ಹಾಜರಾಗಿದ್ದಾರೆ.
ಕೌನ್ ಬನೆಗಾ ಕರೋಡ್ ಪತಿ(ಕೆಬಸಿ) ಶೂಟಿಂಗ್ ನಡೆದಿದೆ.
ಸೆಟ್ ನಲ್ಲಿರುವ ಸಿಬ್ಬಂದಿ ನೀಲಿ ಪಿಪಿಇ ಕಿಟ್ ಹಾಗೂ ಮಾಸ್ಕ್ ಧರಿಸಿ ಕೆಬಿಸಿ ಶೂಟಿಂಗ್ ನಲ್ಲಿ ತೊಡಗಿರುವ ಫೋಟೋವನ್ನು ಅಮಿತಾಭ್ ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ಶೂಟಿಂಗ್ ಗೆ ವಾಪಸಾಗಿದ್ದೇನೆ. 2000 ದಲ್ಲಿ ಪ್ರಾರಂಭವಾದ ಕೆಬಿಸಿ 12 ನೇ ಆವೃತ್ತಿಗೆ 2020ಕ್ಕೆ 20 ವರ್ಷವಾಗಿದೆ. ನೀಲಿ ಪಿಪಿಇ ಕಿಟ್ ಧರಿಸಿ ಸಿಬ್ಬಂದಿ ಸೆಟ್ ನಲ್ಲಿದ್ದಾರೆ” ಎಂದು ಅಮಿತಾಭ್ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
“ಮತ್ತೆ ಕೆಲಸಕ್ಕೆ ಮರಳಿದ್ದೇನೆ. ಕೆಬಿಸಿ 12 ನೇ ಆವೃತ್ತಿ ಪ್ರಾರಂಭವಾಗಿದೆ” ಎಂದು ಟ್ವಿಟರ್ ನಲ್ಲಿ ಅಮಿತಾಭ್ ಅವರು ಬರೆದಿದ್ದಾರೆ.
https://www.instagram.com/p/CEPhKaxB9w7/?utm_source=ig_embed
https://twitter.com/IamHimachali/status/1297783788987023360?ref_src=twsrc%5Etfw%7Ctwcamp%5Etweetembed%7Ctwterm%5E1297783788987023360%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Famitabh-bachchan-shoots-for-kaun-banega-crorepati-in-sea-of-blue-ppe-netizens-stunned-2817875.html
https://twitter.com/macbhim/status/1297785997741064192?ref_src=twsrc%5Etfw%7Ctwcamp%5Etweetembed%7Ctwterm%5E1297785997741064192%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Famitabh-bachchan-shoots-for-kaun-banega-crorepati-in-sea-of-blue-ppe-netizens-stunned-2817875.html