ತನ್ನ ಭಾರತೀಯ ಗ್ರಾಹಕರಿಗೆ ವಿಶಿಷ್ಟವಾದ ದನಿಯ ಅನುಭೂತಿ ನೀಡಲು ಮುಂದಾಗಿರುವ ಆನ್ಲೈನ್ ದಿಗ್ಗಜ ಅಮೆಜಾನ್ ತನ್ನ ಅಲೆಕ್ಸಾ ಸೇವೆಗೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ದನಿಯನ್ನು ಬಳಸಿಕೊಳ್ಳಲು ಮುಂದಾಗಿದೆ.
ಹಾಸ್ಯ, ಹವಾಮಾನ ವರದಿ, ಶಾಯರಿಗಳು, ಸ್ಪೂರ್ತಿಯುತ ಕೋಟ್‌ಗಳು, ಸಲಹೆಗಳು ಹಾಗೂ ಇನ್ನಿತರ ಆಫರಿಂಗ್‌ಗಳನ್ನು ಅಮೆಜಾನ್ ಅಲೆಕ್ಸಾ ಕೊಡಮಾಡಲಿದೆ. ಮುಂದಿನ ವರ್ಷದಿಂದ ಬಿಗ್ ಬಿ ದನಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಅಮೆರಿಕದಲ್ಲಿ ಅದಾಗಲೇ ಅಲೆಕ್ಸಾದ ಈ ಸೇವೆಗಳು ಚಾಲ್ತಿಯಲ್ಲಿದ್ದು, ಸ್ಯಾಮುಯೆಲ್ ಎಲ್ ಜಾಕ್ಸನ್‌ರಂಥ ಸೆಲೆಬ್ರಿಟಿಗಳ ದನಿಯನ್ನು ಬಳಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಬಾಲಿವುಡ್ ಸೆಲೆಬ್ರಿಟಿಯೊಬ್ಬರ ದನಿಯನ್ನು ಅಲೆಕ್ಸಾ ಬಳಕೆ ಮಾಡಿಕೊಳ್ಳುತ್ತಿದೆ.